ಇತ್ತೀಚಿನ ಸುದ್ದಿ
ಭಾರತೀಯ ರಕ್ಷಣಾ ಸಂಶೋಧನಾ ವಿಭಾಗದಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಕೋವಿಡ್ ಪ್ರತಿಕಾಯ ಟೆಸ್ಟ್ ಕಿಟ್
23/05/2021, 09:04
ನವದೆಹಲಿ(reporterkarnataka news): ಭಾರತೀಯ ರಕ್ಷಣಾ ಸಂಶೋಧನಾ ವಿಭಾಗವು ಕೋವಿಡ್ ಸೋಂಕಿನ ವಿರುದ್ಧದ ಹೋರಾಟಕ್ಕೆ 2ಡಿಜಿ ಹೆಸರಿನ ಔಷಧ ಅಭಿವೃದ್ಧಿಪಡಿಸಿದ್ದು, ಇದೀಗ ಕೋವಿಡ್ ಪ್ರತಿಕಾಯ ಟೆಸ್ಟ್ ಕಿಟ್ ಅಭಿವೃದ್ಧಿಪಡಿಸಿದೆ.
‘ಡಿಪ್ ಕೋವನ್’ ಹೆಸರಿನ ಈ ಕಿಟ್ ಶೇ. 97ರಷ್ಟು ಸೂಕ್ಷ್ಮತೆ ಮತ್ತು ಶೇ. 99ರಷ್ಟು ನಿರ್ದಿಷ್ಟತೆ ಹೊಂದಿದೆ ಎಂದು ಹೇಳಲಾಗಿದೆ.
ಎಸ್‌ಎಆರ್‌ಎಸ್ ಕೋವಿ-2 ವೈರಸ್ ಅನ್ನು ಸ್ಪೈಕ್ ಮತ್ತು ನ್ಯೂಕ್ಲಿಯೊಕ್ಯಾಪ್ಸಿಡ್ (ಎಸ್ ಎನ್) ಪ್ರೋಟೀನ್‌ಗಳನ್ನು ಪತ್ತೆ ಮಾಡುತ್ತದೆ. ಡಿಆರ್‌ಡಿಒ ಅಡಿಯಲ್ಲಿ ರಕ್ಷಣಾ ಫಿಸಿಯಾಲಜಿ ಆಂಡ್ ಅಲೈಡ್ ಸೈನ್ಸಸ್ ಸಂಸ್ಥೆ (ಡಿಐಪಿಎಎಸ್) ಈ ಕಿಟ್‌ಅನ್ನು ಅಭಿವೃದ್ಧಿಪಡಿಸಿದೆ.