ಇತ್ತೀಚಿನ ಸುದ್ದಿ
ಭಾರತಕ್ಕೆ ಕೊರೊನಾ 3ನೇ ಅಲೆ; ನೋ ಚಾನ್ಸ್ ಎನ್ನುತ್ತಾರೆ ಖ್ಯಾತ ವೈದ್ಯ ಡಾ. ರಾಜು ಕೃಷ್ಣಮೂರ್ತಿ
04/06/2021, 07:50
ಬೆಂಗಳೂರು(reporterkarnataka news): ಕೊರೊನಾ ಎರಡನೇ ಅಲೆಯ ಆರ್ಭಟ ತಗ್ಗುವ ಮುನ್ನವೇ 3ನೇ ಅಲೆಯ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತದೆ. ಮಕ್ಕಳನ್ನೇ ಟಾರ್ಗೆಟ್ ಮಾಡಿ ಬರುತ್ತದೆ. ಅಕ್ಟೋಬರ್ ನಲ್ಲೇ ಶುರುವಾಗುತ್ತದೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕುರಿತು ರಾಜ್ಯದ ಹೆಮ್ಮೆಯ ವೈದ್ಯರಾದ ಡಾ. ರಾಜು ಕೃಷ್ಣಮೂರ್ತಿ ಏನು ಹೇಳುತ್ತಾರೆ ಎಂಬುದನ್ನು ಓದಿ ನೋಡೋಣ.
ಡಾ. ರಾಜು ಪ್ರಕಾರ ಇದೊಂದು ಹೆದರಿಸುವ ತಂತ್ರವಾಗಿದೆಯಂತೆ. ಅವರು ಹೇಳುವ ಪ್ರಕಾರ 3ನೇ ಅಲೆ ನೋ ಚಾನ್ಸ್. ಜನರಲ್ಲಿ ಈಗಾಗಲೇ ಗಾರ್ಡ್ ಇಮ್ಯುನಿಟಿ ಜಾಸ್ತಿಯಾಗಿದೆಯಂತೆ. ಜನ ಸಮುದಾಯಕ್ಕೆ ರೋಗ ನಿರೋಧಕ ಶಕ್ತಿ ಬಂದಿರುವುದರಿಂದ 3ನೇ ಅಲೆ ಇತ್ತ ಸುಳಿಯದು ಎಂಬ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.
ಡಾ. ರಾಜು ಮತ್ತೊಂದು ಕಿವಿಮಾತು ಹೇಳುತ್ತಾರೆ. ಅದೇನೆಂದರೆ ಮೂರನೇ ಅಲೆ ಬಾರದು ಎಂದು ನಿರ್ಲಕ್ಷ್ಯ ಬೇಡ. ಸಾಕಷ್ಟು ತರಕಾರಿ, ಸೊಪ್ಪು, ಹಣ್ಣು ಹಂಪಲು ತಿಂದು ವ್ಯಾಯಾಮ ಮಾಡಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ ಎನ್ನುತ್ತಾರೆ.