ಇತ್ತೀಚಿನ ಸುದ್ದಿ
ಭಾರತ್ ಕಿಶೋರ್ ಟೈಟಲ್ ವಿಜೇತ ದೇಹದಾರ್ಡ್ಯಪಟು ಜಲ್ಲಿಗುಡ್ಡೆಯ ಸಂತೋಷ್ ಕುಮಾರ್ ಉಳ್ಳಾಲ್ ಹೃದಯಾಘಾತಕ್ಕೆ ಬಲಿ
04/07/2025, 22:25

ಉಳ್ಳಾಲ(reporterkarnataka.com): ಭಾರತ್ ಕಿಶೋರ್ ಟೈಟಲ್ ವಿಜೇತ ದೇಹದಾರ್ಡ್ಯಪಟು ರೈಲ್ವೇ ಉದ್ಯೋಗಿ ಜಲ್ಲಿಗುಡ್ಡೆ ನಿವಾಸಿ ಸಂತೋಷ್ ಕುಮಾರ್ ಉಳ್ಳಾಲ್ (52) ಹುಬ್ಬಳ್ಳಿಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೂಲತಃ ಉಳ್ಳಾಲ ಉಳಿಯ ನಿವಾಸಿಯಾಗಿದ್ದ ಸಂತೋಷ್ ಕುಮಾರ್ ತೊಕ್ಕೊಟ್ಟಿನ ಶಕ್ತಿಭಾರತ್ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದರು.
ಕರ್ನಾಟಕ ಉದಯ, ಭಾರತ್ ಕಿಶೋರ್ ಟೈಟಲ್ ವಿಜೇತರಾಗಿದ್ದರು. ರೈಲ್ವೇ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅವರು ದೇಹದಾರ್ಡ್ಯಪಟುವಾಗಿ ರೈಲ್ವೇಯನ್ನು ಪ್ರತಿನಿಧಿಸಿದ್ದರು. ಮಂಗಳೂರು ರೈಲ್ವೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಹುಬ್ಬಳ್ಳಿಯಲ್ಲಿ ಸಭೆಯಲ್ಲಿ ಭಾಗವಹಿಸಲು ತನ್ನ ಸಹೋದ್ಯೋಗಿಯೊಂದಿಗೆ ತೆರಳುತ್ತಿದ್ದಾಗ ಅವರು ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದು ಬಂದಿದೆ.