ಇತ್ತೀಚಿನ ಸುದ್ದಿ
ಬೆಸೆಂಟ್ ಪ್ರೀಮಿಯರ್ ಲೀಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನು ಸೃಷ್ಟಿಸಲಿ: ಮಣೇಲ್ ಅಣ್ಣಪ್ಪ ನಾಯಕ್
26/05/2022, 22:22
ಮಂಗಳೂರು(reporterkarnataka.com): ಕ್ರಿಕೆಟ್ ಆಟವು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿದ್ದು, ಆಟಗಾರರು ನಿರಂತರ ಪರಿಶ್ರಮದ ಮೂಲಕ ಉನ್ನತ ಮಟ್ಟಕ್ಕೆ ಏರಲು ಸಾಧ್ಯ, ಈ ನಿಟ್ಟಿನಲ್ಲಿ ಬೆಸೆಂಟ್ ಪ್ರೀಮಿಯರ್ ಲೀಗ್ (ಬಿ.ಪಿ.ಎಲ್) ಕ್ರಿಕೆಟ್ ಆಟಗಾರರನ್ನು ಸೃಷ್ಟಿಸುವ ಉನ್ನತಕಾರ್ಯವನ್ನು ಮಾಡುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ
ಮಣೇಲ್ ಅಣ್ಣಪ್ಪ ನಾಯಕ್ ಹೇಳಿದರು.
ಅವರು ಇತ್ತೀಚೆಗೆ ಬೆಸೆಂಟ್ ಸಂಧ್ಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘವು ಆಯೋಜಿಸಿದ್ದ ೭ನೇ ವರ್ಷದ ಬಿ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಹೇಳಿದರು.
ಬಿ.ಪಿ.ಎಲ್ ಪಂದ್ಯಾವಳಿಯು ನಗರದ ಪದುವಾ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ಜರಗಿತು. ಪಂದ್ಯಾವಳಿಯನ್ನು ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಮಂಗಳೂರು ನಗರ ಪಾಲಿಕೆಯ ಕಾರ್ಪೊರೇಟರುಗಳಾದ ಲೀಲಾವತಿ ಪ್ರಕಾಶ್ ಹಾಗೂ ಮನೋಜ್ ಕುಮಾರ್ ಕೋಡಿಕಲ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಬೆಸೆಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷೀನಾರಾಯಣ ಭಟ್, ಸಂಘದ ಮಾಜಿ ಸಲಹೆಗಾರರಾದ ಗಣಪತಿ ಭಟ್ ಎಂ, ಡಾ. ವಾಸಪ್ಪಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆದಿತ್ಯ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಆರ್, ಕ್ರೀಡಾ ಕಾರ್ಯದರ್ಶಿ ಪ್ರಣವ್ ಗಣೇಶ್, ಆಡಳಿತ ಮಂಡಳಿಯ ಸದಸ್ಯ ಸತೀಶ್ ಕುಮಾರ್ ಭಟ್, ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸದ್ದರು.
ಪಂದ್ಯಾವಳಿಯಲ್ಲಿ ೫ ತಂಡಗಳಾದ ಟೀಮ್ ವಿಕ್ಟರಿ, ಟೀಮ್ ಬ್ಲೂ ಸ್ಟ್ರೀಕ್, ಟೀಮ್ ಡಾಮಿನೆಟರ್ಸ್, ಟೀಮ್ ಮಾಂಕ್ ಮತ್ತು ಟೀಮ್ ಮಾನ್ಸ್ಟರ್ ಕ್ರೀಡಾಕೂಟಾದಲ್ಲಿ ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಹಾಗೂ ಸರಣಿ ಶ್ರೇಷ್ಠ ಕ್ರೀಡಾ ಪಟುಗಳಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು. ದಿನವಿಡೀ ನಡೆದ ಲೀಗ್ ಸ್ಪರ್ಧೆಯಲ್ಲಿ ಶಮೀತ್ ತಲಪಾಡಿ ಮಾಲಕತ್ವದ ಡಾಮಿನೆಟರ್ಸ್ ತಂಡವು ಜಯಶಾಲಿಯಾಗಿ ಟ್ರೋಫಿಯನ್ನು ತನ್ನದಾಗಾಸಿಕೊಂಡಿತು. ಕೌಶಿಕ್ ಕದ್ರಿ ಮತ್ತು ಪ್ರತೀಕ್ ಶೆಟ್ಟಿ ಮಾಲಕತ್ವದ ಮಾನ್ಸ್ಟರ್ ತಂಡವು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಹಳೆ ವಿದ್ಯಾರ್ಥಿ ಸತೀಶ ಮರವೂರು ಹಾಗೂ ಸಾತ್ವಿಕ್ ವಿಜೇತರಿಗೆ ಬಹುಮಾನ ವಿತರಿಸಿದರು. ಮಧುರಾಜ್ ಅವರು ಸರಣಿ ಶ್ರೇಷ್ಠ, ಅಕ್ಷಿತ್ ಶೆಟ್ಟಿ ಶ್ರೇಷ್ಠ ದಾಂಡಿಗನಾಗಿ ಹಾಗೂ ಅಂಬಾತನಯ ಶ್ರೇಷ್ಠ ಎಸೆತಗಾರನಾಗಿ ಪ್ರಶಸ್ತಿ ಪಡೆದರು. ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಪ್ರದೀಪ್ ನಿರೂಪಿಸಿದರು. ಪ್ರಣವ್ ಗಣೇಶ್ ವಂದಿಸಿದರು.