ಇತ್ತೀಚಿನ ಸುದ್ದಿ
ಬೆಂಗಳೂರು: ಠಾಣೆಗೆ ಕರೆಯಲು ತೆರಳಿದ್ದ ಮಹಿಳಾ ಹೆಡ್ ಕಾನ್ಸ್ ಟೇಬಲ್ ಗೆ ರೌಡಿಶೀಟರ್ ನಿಂದ ಚೂರಿ ಇರಿತ
17/08/2022, 23:12
ಬೆಂಗಳೂರು(reporterkarnataka.com): ಆರೋಪಿಯನ್ನು ಬಂಧಿಸಲು ಹೋಗಿದ್ದ ಸಮಯದಲ್ಲಿ ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ರೌಡಿಶೀಟರ್ ಒಬ್ಬ ಚಾಕು ಇರಿದ ಘಟನೆ ಹೆಎಎಲ್ ಠಾಣೆ ವ್ಯಾಪ್ತಿಯ ಜ್ಯೋತಿ ನಗರದಲ್ಲಿ ನಡೆದಿದೆ
ಇತ್ತೀಚೆಗಷ್ಟೇ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದ ಆರೋಪಿ, ವಿಚಾರಣೆ ವೇಳೆ ಹಾಜರಾಗದೆ ಇದ್ದ ಕಾರಣ ಆತನನ್ನು ಠಾಣೆಗೆ ಕರೆಯಲು ಹೆಡ್ ಕಾನ್ ಸ್ಟೇಬಲ್ ವಿನುತಾ ತಂಡ ತೆರಳಿದ್ದು, ಈ ಸಮಯದಲ್ಲಿ ಆರೋಪಿ ಮಹಿಳಾ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿ ಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರ ಸಹಾಯದಿಂದ ಆತನನ್ನು ಬಂಧಿಸಿ ಠಾಣೆಗೆ ಕರೆತರಲಾಗಿದೆ. ಚಾಕು ಇರಿತಕ್ಕೆ ಒಳಗಾದ ಮಹಿಳಾ ಕಾನ್ಸ್ಟೇಬಲ್ ವಿನುತ ಚೇತರಿಸಿಕೊಳ್ಳುತ್ತಿದ್ದಾರೆ.