9:56 PM Tuesday18 - November 2025
ಬ್ರೇಕಿಂಗ್ ನ್ಯೂಸ್
Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ಬೆಂಗಳೂರು: ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ಅತ್ಯಾಚಾರ ಮಾಡಿ ಕೊಲೆ ಶಂಕೆ

04/07/2022, 08:45

ಸಾಂದರ್ಭಿಕ ಚಿತ್ರ
ಬೆಂಗಳೂರು(reporterkarnataka.com): ರಾಜಧಾನಿ ಬೆಂಗಳೂರಿನಿಂದ ಮತ್ತೊಂದು ಭಯಾನಕ ಸುದ್ದಿ ಹೊರಬಿದ್ದಿದೆ. ನಗರದ ಕೆಂಗೇರಿ ರಾಮಸಂದ್ರದಲ್ಲಿ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ದೇಹ ಪತ್ತೆಯಾಗಿದೆ‌‌.

ಕೊಲೆಯಾದ ಮಹಿಳೆ ಯಾರು ಎಂಬ ಮಾಹಿತಿ ಇನ್ನೂ ದೊರೆತಿಲ್ಲ.ಕೊಲೆ ಮಾಡಿ ನಂತರ ಬೆಂಕಿ ಹಚ್ಚಿರಬೇಕೆಂದು ಶಂಕಿಸಲಾಗಿದೆ. ಹತ್ಯೆಗೂ ಮೊದಲು ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಇಂದು ಬೆಳಗ್ಗೆ ಸ್ಥಳೀಯರೊಬ್ಬರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಒಂದು ಮೃತದೇಹ ಸುಟ್ಟ ಸ್ಥಿತಿಯಲ್ಲಿ ರಾಮಸಂದ್ರ ನೈಸ್ ರಸ್ತೆ ಪಕ್ಕದಲ್ಲಿ ಬಿದ್ದಿದೆ ಅಂತಾ ಹೇಳಿದರು. ತಕ್ಷಣ ಸ್ಥಳಕ್ಕೆ ಬಂದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ‌.

ಈ ವೇಳೆ ಅಲ್ಲಿ ಹೆಣವಾಗಿದ್ದು 25 ರಿಂದ 30 ವರ್ಷದ ಮಹಿಳೆ ಅನ್ನೋದು ಗೊತ್ತಾಗಿದೆ.24 ಗಂಟೆಗೂ ಮೊದಲು ಬೆಂಕಿ ಹಚ್ಚಿರೊ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.ಮೃತದೇಹ ಪತ್ತೆಯಾದ ಜಾಗದಲ್ಲಿ ಸಿಕ್ಕ ಮದ್ಯದ ಬಾಟಲಿಗಳು, ಚಪ್ಪಲಿಗಳನ್ನೆಲ್ಲ ವಶಕ್ಕೆ ಪಡೆದಿರುವ ಕೆಂಗೇರಿ ಪೊಲೀಸರು ತನಿಖೆ ನಡೆಸ್ತಿದ್ದಾರೆ .

ಇನ್ನೂ ಮೃತದೇಹ ಸಿಕ್ಕ 50 ಮೀಟರ್ ದೂರದಲ್ಲಿ ಒಂದು ನಿರ್ಮಾಣ ಹಂತದ ಪಾಳು ಕಟ್ಟಡ ಇದ್ದು,ಅಲ್ಲಿಯೂ ಸುಟ್ಟ ಕುರುಹುಗಳು ಇದ್ದು ಇಲ್ಲಿ ಬೆಂಕಿ ಹಚ್ಚಿ ನಂತರ ಮರದ ಕೆಳಗೆ ಸುಟ್ಟಾಕಿರೊ ಅನುಮಾನ ಇದೆ. ಅಷ್ಟೇ ಅಲ್ಲ ಬೇರೆ ಕಡೆ ಕೊಲೆ ಮಾಡಿ ಇಲ್ಲಿ ತಂದು ನಿರ್ಜನ ಪ್ರದೇಶದಲ್ಲಿ ಬಿಸಾಡಿಹೋಗಿರುವ ಅನುಮಾನ ಕೂಡ ಇದೆ.ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ .

ಇತ್ತೀಚಿನ ಸುದ್ದಿ

ಜಾಹೀರಾತು