5:17 PM Sunday6 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಬೆಂಗಳೂರು: 24ರಂದು ಹಿರಿಯ ಪತ್ರಕರ್ತ ಜಗಳೂರು ಲಕ್ಷ್ಮಣ ರಾವ್ ಅವರ ಅಭಿನಂದನಾ ಗ್ರಂಥ ಬಿಡುಗಡೆ; ಸನ್ಮಾನ

12/05/2025, 20:35

ಬೆಂಗಳೂರು(reporterkarnataka.com): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಜಗಳೂರು ಲಕ್ಷ್ಮಣ ರಾವ್ ಅವರ ಅಭಿನಂದ ಗ್ರಂಥ ಬಿಡುಗಡೆ ಹಾಗೂ ಜಗಳೂರು ದಂಪತಿಗೆ ಸನ್ಮಾನ ಸಮಾರಂಭ ಮೇ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.
ಜಗಳೂರು ಅವರ ಕುರಿತು ಅವರ ನಿಕಟವರ್ತಿಯಾದ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಬಂಗ್ಲೆ ಮಲ್ಲಿಕಾರ್ಜುನ ಅವರು ಬರೆದು ಕಿರು ಲೇಖನವನ್ನು ನೀಡಲಾಗಿದೆ.
ಹೆಸರು ಹೇಳುವಂತೆ ಜಗಳೂರು ಎಂದರೆ ನಮ್ಮ ಕಡೆಯ ಭಾಷೆಯಲ್ಲಿ ಜಗಳವಾಡುವಂತ ಊರು ಎಂಬರ್ಥದಲ್ಲಿ ಸಾಗಿದರೂ, ಕೆಲವೊಮ್ಮೆ ನಾನು ನಮ್ಮ ತಂದೆಯ ಸಮಾನರಾದ ಜಗಳೂರು ಲಕ್ಷ್ಮಣರಾವ್ ರವರನ್ನು ಈ ಕುರಿತಂತೆ ನಾನು ತರ್ಕ ಮಾಡಿದ್ದು ಉಂಟು. ಸಾರ್ ಜಗಳೂರು ಎಂಬ ಊರಿನ ಹೆಸರು ವಿಚಿತ್ರವಾಗಿದ್ದು ಜಗಳ ವಾಡುವ ಹಿನ್ನೆಲೆಯಿಂದ ಜಗಳೂರು ಅಂತ ಬಂದಿರಬಹುದೇ ಎಂಬ ನನ್ನ ಪ್ರಶ್ನೆಗೆ,ಇಲ್ಲಾ ಅದು ಜಗಳೂರು ಅಲ್ಲ ಊರಿನ ಜಗುಲಿ ಪಕ್ಕದಲ್ಲಿ ಇದ್ದಿದ್ದರಿಂದ ಜಗಲೂರು ಅಂತ ಇದ್ದು, ಅದೂ ಆಡು ಬಾಷೆಯಲ್ಲಿ ಜಗಲೂರು ಹೋಗಿ ಜಗಳೂರು ಆಗಿದೆ ಎಂಬ ಸಮಜಾಯಿಷಿ ನೀಡಿದ ನಂತರ ನಾನು ಮೌನಕ್ಕೆ ಶರಣಾದೆ.
ಮೃದು ಸ್ವಭಾವದ ತಾಳ್ಮೆಯ ಪ್ರತೀಕವಾಗಿರುವ ಜಗಳೂರು ಲಕ್ಷ್ಮಣ ರಾವ್ ಮೂಲತಃ ದಾವಣಗೆರೆ ಜಿಲ್ಲೆಯ ಬೇತೂರಿನವರು. ತಂದೆ ಬಿ.ರಂಗಾರಾವ್ ತಾಯಿ ಪದ್ಮಾವತೆಮ್ಮ. ಇವರ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸವೆಲ್ಲಾ ಜಗಳೂರು ತಾಲೂಕಿನಲ್ಲಿ ಪೂರೈಸಿ ನಂತರ ಬಿಕಾಂ ಪದವಿಯನ್ನು ಬೆಂಗಳೂರಿನ ಎಸ್.ಎಲ್.ಎನ್. ಕಾಲೇಜಿನಲ್ಲಿ ಪೂರೈಸಿದರಾದರೂ ಬಹಳ ಸೌಮ್ಯ ಸ್ವಭಾವ ಹೊಂದಿದ್ದ ಇವರು ಯಾವ ಹುಡುಗಿಯನ್ನು ಕಾಲೇಜು ದಿನಗಳಲ್ಲಿ ಕಣ್ಣೆತ್ತಿ ನೋಡದ ಹಿನ್ನೆಲೆಯಲ್ಲಿ ಪ್ರೇಮಾಂಕುರವಾಗದೆ ಇದ್ದದ್ದು ಇವರ ಜೀವನದ ವಿಶೇಷ. ಪದವಿ ನಂತರ ಇವರು ಸಧ್ಬೋಧ ಚಂದ್ರಿಕೆ ಪತ್ರಿಕೆಯ ಬೆಂಗಳೂರಿನ ಮೇಲುಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಲೇ ಬಿ.ಎ. ಹಾನರ್ಸ ಸೆಂಟ್ರಲ್ ಕಾಲೇಜಿನಲ್ಲಿ ಪಡೆದು ನಾಡಿನ ದಿಗ್ಗಜ ಬರಹಗಾರರಾದ ಜಿ.ಎಸ್.ಶಿವರುದ್ರಪ್ಪ, ಲಂಕೇಶ್ ಮಾಸ್ತರು, ಎಸ್.ಎಲ್.ಎನ್.ಭಟ್ ಹಾಗೂ ಹಂಪನಾ ಅವರುಗಳ ಗರಡಿಯಲ್ಲಿ ಪಳಗಿದರು.
ಗೋಕಾಕ್ ಚಳುವಳಿ ಪ್ರಾರಂಭಿಸಿದ ಐವರು ಪ್ರಮುಖರಲ್ಲಿ ಜಗಳೂರು ಲಕ್ಷ್ಮಣ ರಾವ್ ಒಬ್ಬರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ. ರೆಹಮಾನ್ ಖಾನ್, ಶಿವಪ್ರಸಾದ್, ಸುಧಾಮ, ಗೋವಿಂದಳ್ಳಿ ದೇವಗೌಡರು ಜೊತೆ ಗೋಕಾಕ್ ಚಳುವಳಿ ಕಿಚ್ಚು ಹೊತ್ತಿಸಿದ ಹಿರಿಮೆಯ ಹಾದಿಯ ಜೊತೆಗೆ ಕರ್ನಾಟಕದಲ್ಲಿ ಕನ್ನಡ ಪದವೀಧರರಿಗೆ ಕೆಲಸಕ್ಕೆ ಒತ್ತಾಯಿಸಿ ಸರ್ಕಾರದ ವಿರುದ್ದ ಬೂಟ್ ಪಾಲಿಸ್ ಕಾರ್ಯಕ್ರಮವನ್ನು ಹಮಿಕೊಳ್ಳುವುದರ ಜೊತೆಗೆ ನಾಡಿನ ಅನೇಕ ಹೋರಾಟಗಾರರು, ಸಾಹಿತಿಗಳು ಮೈಸೂರು ಬ್ಯಾಂಕ್ ವೃತ್ತದಿಂದ ಜನತಾ ಬಜಾರ್ ವರೆಗೆ ಮೆರವಣಿಗೆಯ ಮುಖಾಂತರ ಹೋರಾಟ ನಡೆಸಿದ್ದು ಇತಿಹಾಸವಾಗಿ ಇಂದಿಗೂ ಉಳಿದಿದೆ.
ಒಂದು ಕಡೆ ಹೋರಾಟದ ಜೊತೆಗೆ ನಾಡಿನ ಖ್ಯಾತ ರಸಿಕ ಪುತ್ತಿಗೆ ಇವರ ಮಗಳಾದ ಅನ್ನಪೂರ್ಣರವರೊಂದಿಗೆ ಮದುವೆಯ ಹೊಸ್ತಿಲಿಗೆ ಕಾಲಿಡುತ್ತಾರೆ. ಅನ್ನಪೂರ್ಣರವರು ಭರತ ನಾಟ್ಯದಲ್ಲಿ ಎಂ.ಎ. Distinction ಜೊತೆಗೆ ರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೆ ಏರಿಸಿಕೊಂಡಿರುತ್ತಾರೆ. ಎರೆಡು ಮುದ್ದಾದ ಒಂದು ಗಂಡು ಒಂದು ಹೆಣ್ಣು ಮಗವನ್ನು ಹೊಂದಿದ್ದರೂ ಕೂಡ ಜಗಳೂರು ಅವರು ನಿಜಕ್ಕೂ ದುಃಖತಪ್ತರು.
ಮಗಳು ಚಾರುಸ್ಮಿತ ಇಂದು ಪ್ರತಿಷ್ಠಿತ ಅಕಮಾಯಿ ಕಂಪನಿಯ ಎಚ್ ಆರ್ ರ್ಮ್ಯಾನೇಜರ್ ರಾಗಿ ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ದಾಗ ಹಾಗೂ ಏಕೈಕ ಸುಪುತ್ರ ಶ್ರೀರಂಗ ಚಿದಂಬರ ವೃತ್ತಿಯಲ್ಲಿ ಇಂಜಿಯರ್ ಆಗಿ ಸೇವೆ ಸಲ್ಲಿಸುತ್ತಾ ತನ್ನ 28ನೇ ವಯಸ್ಸಿನ ಜೀವನದ ಕನಸಾದ 28 ರಾಷ್ಟ್ರಗಳನ್ನು ಸುತ್ತ ಬೇಕೆಂಬ ಮಹತ್ವಕಾಂಕ್ಷೆಯಲ್ಲಿ, 27 ರಾಷ್ಟ್ರಗಳನ್ನು ಸುತ್ತಿ ಕೊನೆ ರಾಷ್ಟ್ರವೆನ್ನುವಂತೆ ಶ್ರೀಲಂಕಾದ ಸಮುದ್ರದ ದಡದಲ್ಲಿ ಈಜುವಂತ ಸಮಯದಲ್ಲಿ ಆ ವಿಧಿಯ ದುರ್ವಿಧಿ ಆಟಕ್ಕೆ ಬಲಿಯಾಗಿ ಬಾರದ ಲೋಕಕ್ಕೆ ಪಯಣಿಸಿದ್ದು ಇಂದಿಗೂ ಜಗಳೂರು ರವರಿಗೆ ಆ ನೋವಿನಿಂದ ಹೊರಬರಲಾರದಂತ ಸ್ಥಿತಿ ಇದ್ದರೂ ಸಹ ಎಂದಿಗೂ ಯಾರೊಂದಿಗೂ ತೋರ್ಪಡಿಸಿ ಕೊಳ್ಳದೆ ನಗುಮುಖದಿಂದ ಈ 80ನೇ ವಯಸ್ಸಿನಲ್ಲಿಯೂ ಕೂಡ ಚಿರ ಯುವಕರು ನಾಚಿಸುವಂತ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಗುತ್ತಿರುವುದು ಪ್ರತಿಯೊಬ್ಬರಿಗೂ ಸ್ಪೂರ್ತಿಯೇ ಸರಿ.
ಮೊದಲನೇ ಮಡದಿ ಅನ್ನಪೂರ್ಣರವರು ಮದುವೆಯಾಗಿ ಎರೆಡು ಮಕ್ಕಳು ಚಿಕ್ಕವರಿರುವಾಗಲೇ ಕಾಲನ ಕರೆಗೆ ಓಗೊಟ್ಟು ಸಾಗಿದ ನಂತರ ಚಿಕ್ಕ ಮಕ್ಕಳ ಹಿತದೃಷ್ಟಿಯಿಂದ ಎರಡನೇ ಮದುವೆಯನ್ನು ನಂದಿನಿಯವರೊಂದಿಗೆ ನೆರವೇರಿದ್ದರೂ ಅಂದಿನಿಂದ ಇಂದಿನವರೆಗೂ ಮನೆ,ಮನಸ್ಸು ಜೊತೆಗೆ ಮಕ್ಕಳನ್ನು ಯಾವತ್ತೂ ಮಲತಾಯಿಯಂತೆ ನಡೆದುಕೊಳ್ಳದೇ ಇಂದಿಗೂ ಸಂಸಾರವನ್ನು ಚೆನ್ನಾಗಿ ತೂಗಿಸಿಕೊಂಡು ಸಾಗುತ್ತಾ ಜಗಳೂರು ಲಕ್ಷ್ಮಣರಾವ್ ರವರನ್ನು ಒಂದು ಚಿಕ್ಕ ಮಗುವಿನ ಹಾರೈಕೆ ಯಾವ ರೀತಿ ಸಾಗುತ್ತೋ ಅದಕ್ಕಿಂತ ಹೆಚ್ಚಿನದಾಗಿ ತೊಟ್ಟಿಲಲ್ಲಿ ತೂಗುವ ರೀತಿ ಸಾಗುತ್ತಿರುವುದು ಪ್ರತಿನಿತ್ಯ ನಾನು ನನ್ನ ಕಣ್ಣಾರೆ ಕಾಣುತ್ತಿದ್ದೇನೆ. ಅಂದಿನ ವಿಧಾನ ಪರಿಷತ್ ಸಭಾಪತಿ ಕಲ್ಮಣಕರ್ ರವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದಂತ ಜಗಳೂರು ರವರು ಏನಾದರೂ ಆಗು ಮೊದಲು ಮಾನವನಾಗು ಖ್ಯಾತಿಯ ಬಾಳಪ್ಪ ಹುಕ್ಕೇರಿ ರವರಿಗೆ “ಕಬೀರ್ ಸಮ್ಮಾನ್” ಪ್ರಶಸ್ತಿ ಬಂದಾಗ ಅಂದಿನ ರಾಷ್ಟ್ರಪತಿ ಬಿ.ಡಿ ಜತ್ತಿ ಯವರ ಅಧ್ಯಕ್ಷತೆಯಲ್ಲಿ ಯವನಿಕಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಗಳೂರು ರವರಿಗೂ ಸನ್ಮಾನ ವಾಗಿದ್ದು ವಿಶೇಷವಾಗಿತ್ತು.
ಈ ಹಿಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ರಾಜ್ಯ ಖಜಾಂಚಿಗಳಾಗಿ ಸೇವೆ ಸಲ್ಲಿಸಿದ್ದರೂ ಕೂಡ ತೃಪ್ತಿ ಸಿಕ್ಕಿಲ್ಲಿ ಜೊತೆಗೆ ಪತ್ರಕರ್ತರ ಸಂಘದ ಸದಸ್ಯರಿಗೆ ನಿಜವಾದ ಅನುಕೂಲ ಮೂಲಸೌಕರ್ಯ ಒದಗಿಸಿಕೊಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದರ ಬಗ್ಗೆ ಬಹಳಷ್ಟು ನೋವಿದೆ ಎಂದು ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಬಾಬುಕೃಷ್ಣಮೂರ್ತಿ, ಹರಿಹರಪ್ರಿಯ, ಎಚ್ಚನ್ಕೆ ಹಾಗೂ ಲಕ್ಷ್ಮೀಶ ಕಾಟುಕುಕ್ಕೆ ಯವರೊಂದಿಗೆ ಇಂದಿಗೂ ನಿಕಟ ಸಂಪರ್ಕವಿಟ್ಟುಕೊಂಡಿರುವುದು ಇವರ ಸ್ನೇಹಕ್ಕೆ ಸಾಕ್ಷಿ ಎನ್ನುವಂತಿದೆ.
ಮಾನವ ಚಾರಿಟೀಸ್ ನಲ್ಲಿ ಜನ ಮೆಚ್ಚುವ ಸೇವೆಗೆ “ಉತ್ತಮ ಮಾನವ ಪ್ರಶಸ್ತಿ” ಪುರಸ್ಕಾರ ದೊರೆತಿದೆ.
ಅಗಡಿ ಆನಂದವನದ ಶ್ರೀಶೇಷಾಚಲ ಸದ್ಗುರುಗಳ ಸಂಸ್ಕೃತ ಪಾಠ ಶಾಲೆಗಳೊಡನೆ ನಿಕಟ ಸೇವೆ.
ಮಂತ್ರಾಲಯದಿಂದ ಶ್ರೇಷ್ಟ ಪತ್ರಕರ್ತನಾಗಿ ಆಯ್ಕೆಯ ಜೊತೆಗೆ 10 ಸಾವಿರ ರೂಗಳ ನಗದು ಪ್ರಶಸ್ತಿ ಫಲಕವನ್ನು ಮಂತ್ರಾಲಯದ ಯತಿಗಳಾದ ಶ್ರೀಸುಶಮೀಂದ್ರ ಹಾಗೂ ಸುಯತೀಂದ್ರರ ನೇತೃತ್ವದಲ್ಲಿ ಪ್ರೀತಿಯ ಸನ್ಮಾನ ಪಡೆದಂತ ಭಾಗ್ಯಶಾಲಿ.
ಕನ್ನಡದಲ್ಲೇ ಪರೀಕ್ಷೆ ಬರೆಯಲು ಕೆ.ಪಿ.ಎಸ್.ಸಿ. ಮುಂದೆ ಬೃಹತ್ ಧರಣಿ ನಡೆಸಿದಂತ ಹೆಗ್ಗಳಿಕೆ ಈ ಜಗಳೂರು ರವರದ್ದು.
ನೂರಾರು ಸಭೆ ಸಮಾರಂಭಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿ,ಅನೇಕ ಪ್ರಶಸ್ತಿಗಳ ಸ್ವೀಕಾರದ ಜೊತೆಗೆ ಇಂದು ಕಾನಿಪ ಧ್ವನಿಯಲ್ಲಿ ರಾಜ್ಯ ಮಾಧ್ಯಮ ಸಲಹೆಗಾರರಾಗಿ‌ ಸೇವೆ ಸಲ್ಲಿಸುತ್ತಾ ನೆಮ್ಮದಿಯ ಜೀವನದ ಹಾದಿಯಲ್ಲಿ ಸಾಗುತ್ತಿದ್ದರೂ ಇಷ್ಟೆಲ್ಲಾ ನಾಡಿಗೂ, ಪತ್ರಿಕೋದ್ಯಮಕ್ಕೆ,ಪತ್ರಕರ್ತರ ಸಂಘಟನೆಗಳಿಗೆ ರಾಜ್ಯ ಪದಾಧಿಕಾರಿಯಾಗಿ ಸೇವೆಯ ಜೊತೆಗೆ ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ 27 ವರ್ಷಗಳ ಕಾಲ ಸುದೀರ್ಘ ಬೆಂಗಳೂರಿನ ಡೆಸ್ಕ್ ನಲ್ಲಿ ಸೇವೆ ಸಲ್ಲಿಸಿದ್ದರೂ ಕೂಡ ಇಂದಿಗೂ ಇವರನ್ನು ಯಾರೂ ಗುರುತಿಸದಾಗಿದ್ದು ವಿಷಾದನೀಯವೇ ಸರಿ. 80ರ ಆಸುಪಾಸಿನ ಜೀವನ ಪಯಣ ಸಾಗಿಸುತ್ತಿರುವ ಜಗಳೂರು ಲಕ್ಷ್ಮಣರಾವ್ ರವರಿಗೆ ಸರಕಾರದ ಮಾಸಾಶನ ಸೌಲಭ್ಯ ದೊರೆಯದಿರುವುದು ದುರಾದೃಷ್ಟಕರ ಅಂತ ತಮ್ಮ ಮುಂದೆ ನಿವೇದಿಸುತ್ತಾ ಮಾಸಾಶನಕ್ಕೆ ನಮ್ಮ ಕಾನಿಪ ಧ್ವನಿಯಿಂದ ಪ್ರಯತ್ನ ಸಾಗಿದ್ದು,ಇವರ ಇಷ್ಟೆಲ್ಲಾ ಸೇವೆಯನ್ನು ಪರಿಗಣಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಇದೇ ತಿಂಗಳು ಅಂದರೆ ಮೇ 24 , 2025 ರಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜಗಳೂರು ಲಕ್ಷ್ಮಣರಾವ್ ರವರ ಅಭಿನಂದನಾ ಗ್ರಂಥ ಬಿಡುಗಡೆ ಜೊತೆಗೆ ಜಗಳೂರು ದಂಪತಿಗೆ ಹೃದಯ ಸ್ಪರ್ಶಿ ಸನ್ಮಾನ ಏರ್ಪಡಿಸಲಾಗಿದೆ. ನಾಡಿನ ಸಹೃದಯವಂತರು ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಬೇಕೆಂದು ಕೋರಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು