ಇತ್ತೀಚಿನ ಸುದ್ದಿ
ಬೆಂಗಳೂರು: ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಯ್ಸಳ ವಾಹನ; ಬೆಂಕಿ ನಂದಿಸಿದ ಸ್ಥಳೀಯರು
25/07/2022, 21:17

ಬೆಂಗಳೂರು(reporterkarnataka.com): ನಡುರಸ್ತೆಯಲ್ಲೇ ಪೊಲೀಸರ ಹೊಯ್ಸಳ ವಾಹನ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಉರಿದಿರುವ ಘಟನೆ ಬೆಂಗಳೂರಿನ ಸಿಟಿ ಮಾರುಕಟ್ಟೆಯ ಬಳಿಯಲ್ಲಿನ ವೃತ್ತದಲ್ಲಿ ಇಂದು ನಡೆದಿದೆ.
ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯ ಹೊಯ್ಸಳ-79 ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಕೂಡಲೇ ಅದರಲ್ಲಿದ್ದ ಪೊಲೀಸರು ಕೆಳಗೆ ಇಳಿಯುತ್ತಿದ್ದಂತೇ ವಾಹನ ಹೊತ್ತಿ ಉರಿದಿದೆ.
ಈ ಘಟನೆಯನ್ನು ಕಂಡಂತ ಸ್ಥಳೀಯರು, ಕೂಡಲೇ ಹೊಯ್ಸಳ ವಾಹನಕ್ಕೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಹೊತ್ತಿಕೊಂಡ ಪರಿಣಾಮ, ಹೊಯ್ಸಳ-79 ವಾಹನ ಸುಟ್ಟು ಕರಕಲಾಗಿದೆ.