3:18 PM Sunday28 - December 2025
ಬ್ರೇಕಿಂಗ್ ನ್ಯೂಸ್
ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ಭಾರತ ರತ್ನ ವಾಜಪೇಯಿ ಗ್ರಂಥಾಲಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟನೆ ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ… ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:…

ಇತ್ತೀಚಿನ ಸುದ್ದಿ

ಬೆಂಗಳೂರು ಮುಳಿಯದಲ್ಲಿ ಮುಳಿಯ ಪಾಕೋತ್ಸವ: ಬೆಂಕಿ ಉಪಯೋಗಿಸದೇ ನಡೆದ ಸ್ಪರ್ಧೆ!

16/07/2024, 18:21

ಬೆಂಗಳೂರು(reporterkarnataka.com): ಮುಳಿಯ ಜ್ಯುವೆಲ್ಸ್ ಹಾಗೂ ಸಂಧ್ಯಾ ಜಯರಾಮ್ ಸಹಯೋಗದಲ್ಲಿ ಡಿಕೆನ್ಸನ್ ರಸ್ತೆಯಲ್ಲಿನ ಮಣಿಪಾಲ್ ಸೆಂಟರ್ ಆವರಣದಲ್ಲಿ ಮುಳಿಯ ಪಾಕೋತ್ಸವ ಭಾನುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯಲಕ್ಷ್ಮೀ ಎಂ. ನಡೆಸಿದರು. ಅಧ್ಯಕ್ಷತೆಯನ್ನು ಮುಳಿಯ ಜ್ಯುವೆಲ್ಸ್ ಸಿಎಂಡಿ ಕೇಶವ ಪ್ರಸಾದ್ ಮುಳಿಯ ವಹಿಸಿದ್ದರು. ಖ್ಯಾತ ಹಿನ್ನಲೆ ಗಾಯಕಿ ಶ್ವೇತಾ ಪ್ರಭು ಉಪಸ್ಥಿತರಿದ್ದರು.

ಪಾಕೋತ್ಸವದಲ್ಲಿ ಶ್ರೀಮಾನ್ – ಶ್ರೀಮತಿ ವಿಭಾಗದಲ್ಲಿ ಪುಷ್ಪಲತಾ – ಕೃಷ್ಣಾನಂದ ಪ್ರಥಮ, ಸವಿತಾ – ಸುರೇಶ್ ದ್ವಿತೀಯ, ಲಾವಣ್ಯ – ನವೀನ್ ತೃತೀಯ ಸ್ಥಾನ ಪಡೆದರು. ಬಂಧು-ಮಿತ್ರರು ವಿಭಾಗದಲ್ಲಿ ದಿವ್ಯಾ – ಹರ್ಷಿಕಾ ಪ್ರಥಮ, ಹೇಮಾವತಿ – ಜ್ಞಾನೇಶ್ವರಿ – ಮೈತ್ರಿ ಭಟ್ ದ್ವಿತೀಯ, ಮಹಾಲಕ್ಷ್ಮೀ ತೃತೀಯ ಸ್ಥಾನ ಪಡೆದರು. ಲಕ್ಕಿಡ್ರಾದಲ್ಲಿ ಕೃತಿಕಾ ಅಕ್ಷಯ್ ಜೋಶಿ ಪ್ರಥಮ, ಸರೋಜಾ ದ್ವಿತೀಯ ಸ್ಥಾನ ಗಳಿಸಿದರು.
ಪಾಕಶಾಲಾ ನಿರ್ದೇಶಕಿ ವಿನೋದ ವಿ.ಅಡಿಗ ಮಾತನಾಡಿ ಚಿನ್ನ ಮತ್ತು ಹಣವು ಮಹಿಳೆಯರಿಗೆ ತುಂಬಾ ಹತ್ತಿರವಾಗಿದೆ. ಆದರೆ ಇಂದು ಬೆಂಕಿ ಉಪಯೋಗಿಸದೇ ನಡೆದ ಸ್ಪರ್ಧೆಯೂ ತುಂಬಾ ಕುತೂಹಲವಾಗಿದ್ದು, ಹಸಿ ತರಕಾರಿ, ಹಣ್ಣು ಗಳಿಂದ ತಯಾರಿಸಿದ ಆಹಾರವು ಆರೋಗ್ಯಕ್ಕೆ ತುಂಬಾ ಮುಖ್ಯ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಂಧ್ಯಾ ಜಯರಾಮ್, ಮುಳಿಯ ಜ್ಯುವೆಲ್‌ನ ವೇಣು ಶರ್ಮಾ, ಸುಬ್ರಹ್ಮಣ್ಯ ಭಟ್, ಖಾಸಗಿ ಸುದ್ದಿವಾಹಿನಿ ನಿರೂಪಕಿ ನಮಿತಾ ಜೈನ್ ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು