8:10 PM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಬೆಂಗಳೂರಿನಲ್ಲಿ ಆಗ್ಮೆಂಟೆಡ್ ರಿಯಾಲಿಟಿ ನೆರವಿನಲ್ಲಿ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆ

14/02/2024, 21:40

ಬೆಂಗಳೂರು(reporterkarnataka.com):” ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪಿಕ್ಸೀ ಮೆಡಿಕಲ್ (Pixee Medical) ಕಟ್ಟಿಂಗ್ ಎಡ್ಜ್ ಆಗ್ಮೆಂಟೆಡ್ ರಿಯಾಲಿಟಿ(AR) ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಡಬಲ್ ಟೋಟಲ್ ನೀ ರೀಪ್ಲೇಸ್ ಮೆಂಟ್ (TKR) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡಿದೆ.
ರೋಗಿಯೊಬ್ಬರಿಗೆ ಎರಡೂ ಮೊಣಕಾಲನ್ನು ಜೋಡಣೆ ಮಾಡುವ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಫೋರ್ಟಿಸ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ನಿರ್ದೇಶಕ ಆರ್ಥೋಪಿಡಿಕ್ ಸರ್ಜನ್ ಆಗಿರುವ ಡಾ. ನಾರಾಯಣ ಹುಲ್ಸೆ ನೇತೃತ್ವದ ಪಿಕ್ಸಿಯ ನುರಿತ ಶಸ್ತ್ರಚಿಕಿತ್ಸಕರ ತಂಡವು 65 ವರ್ಷದ ರೋಗಿಗೆ ಎರಡೂ ಮೊಣಕಾಲಿನ ಜೋಡಣೆ ಮಾಡುವಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.
ಟೋಟಲ್ ನೀ ರೀಪ್ಲೇಸ್ ಮೆಂಟ್ ಸರ್ಜರಿಯಲ್ಲಿ AR ತಂತ್ರಜ್ಞಾನದ ಏಕೀಕರಣವು ಒಂದು ಮಾದರಿ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಇದು ನಿಖರವಾದ ಮತ್ತು ಪರ್ಸನಲೈಸ್ಡ್ ರೋಗಿಗಳ ಆರೈಕೆಯ ಯುಗಕ್ಕೆ ನಾಂದಿ ಹಾಡುತ್ತದೆ ಎನ್ನುತ್ತಾರೆ ಡಾ.ನಾರಾಯಣ್ ಹುಲ್ಸೆ ಅವರು.
“AR ಸಹಾಯದ ಡಬಲ್ ಟೋಟಲ್ ನೀ ರೀಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆಯ ಯಶಸ್ಸು ಮೂಳೆ ಶಸ್ತ್ರಚಿಕಿತ್ಸೆಯ ರೂಪಾಂತರದ ಹಂತದಲ್ಲಿ ಗಣನೀಯ ಸಾಧನೆಯನ್ನು ಸೂಚಿಸುತ್ತದೆ. ಇದು ಅತ್ಯುತ್ತಮ ರೋಗಿಗಳಲ್ಲಿ ಉತ್ತಮ ಫಲಿತಾಂಶಗಳಿಗಾಗಿ ಹೆಚ್ಚು ವೈಯಕ್ತಿಕ ಇಂಟರ್ ವೆನ್ಷನ್ ಗಳನ್ನು ನೀಡಲು ನಮಗೆ ಅನುವು ಮಾಡಿಕೊಡುತ್ತದೆ. ವರ್ಧಿತ ರಿಯಾಲಿಟಿ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಹೊಸ ತಲೆಮಾರಿನ ತಂತ್ರಗಳು ಮತ್ತು ಉಪಕರಣಗಳ ಭವಿಷ್ಯದ ಬೆಳವಣಿಗೆಗಳನ್ನು ಸೂಚಿಸುತ್ತದೆ’’ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ 65 ವರ್ಷದ ಮಹಿಳೆಯು ಸುಮಾರು ಒಂದು ದಶಕಗಳವರೆಗೆ ತೀವ್ರವಾದ ಮೊಣಕಾಲು ನೋವನ್ನು ಅನುಭವಿಸುತ್ತಿದ್ದರು. ಇಷ್ಟೆಲ್ಲಾ ನೋವಿದ್ದರೂ ಶಸ್ತ್ರಚಿಕಿತ್ಸೆಯ ಭಯದಿಂದ ಮೊಣಕಾಲು ಬದಲಾವಣೆ ಪ್ರಕ್ರಿಯೆಗೆ ಮುಂದಾಗಿರಲಿಲ್ಲ. ಡಾ.ಹುಲ್ಸೆ ಅವರು ಮಹಿಳೆಯ ಸಂಬಂಧಿಕರೊಂದಿಗೆ ಸಮಾಲೋಚನೆ ನಡೆಸಿ ಶಸ್ತ್ರಚಿಕಿತ್ಸೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅದೇ ರೀತಿ ಮಹಿಳೆಗೂ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿದರು. ಮಹಿಳೆಯು ನಡೆಯುವಾಗ ಕುಂಟುತ್ತಿದ್ದರು. ಸಮರ್ಪಕವಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಮೊಣಕಾಲನ್ನು ಹೆಚ್ಚು ಚಲನೆ ಮಾಡಲು ಅಸಾಧ್ಯವಾಗಿತ್ತು. ಹೀಗಾಗಿ ಸಂಪೂರ್ಣ ಮೊಣಕಾಲು ಬದಲಿಸುವುದು ಕಾರ್ಯಸಾಧುವಾದ ಚಿಕಿತ್ಸೆಯಾಗಿದೆ’’ ಎಂದು ಮನವರಿಕೆ ಮಾಡಿಕೊಡಲಾಯಿತು ಎಂದು ಹುಲ್ಸೆ ತಿಳಿಸಿದರು.
ಶಾಶ್ವತ ಮತ್ತು ಪರಿಣಾಮಕಾರಿ ಮೊಣಕಾಲು ಬದಲಾವಣೆ ನಿಖರವಾದ ಜೋಡಣೆ ಸಾಧಿಸುವುದು ನಿರ್ಣಾಯಕವಾಗಿದೆ. ಪಿಕ್ಸಿಯ AR ತಂತ್ರ, ಬೋನ್ ಕರೆಕ್ಷನ್ ಮತ್ತು ಸಾಫ್ಟ್ ಟಿಶ್ಯೂ ಅಡ್ಜೆಸ್ಟ್ ಮೆಂಟ್ ನಡುವಿನ ಉತ್ತಮ ಸಮತೋಲನ, ನೈಸರ್ಗಿಕ ಮೊಣಕಾಲು ಜೋಡಣೆಯನ್ನು ಪುನರ್ ಸ್ಥಾಪಿಸುವ ಗುರಿಯನ್ನು ಹೊಂದಿರುತ್ತದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸುವ ಶಸ್ತ್ರಚಿಕಿತ್ಸೆಗೆ ಶ್ರೀಮತಿ ವಿಜಯ್ ಅವರು ಮುಂದಾದರು ಮತ್ತು ಏಕಕಾಲಕ್ಕೆ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಸುಮಾರು 2.5 ಗಂಟೆಗಳ ಕಾಲ ನಡೆಸಲಾಯಿತು. ಇದಾದ ಬಳಿಕ ರೋಗಿಯು ಉತ್ತಮ ರೀತಿಯಲ್ಲಿ ಚೇತರಿಸಿಕೊಂಡರು ಮತ್ತು ಕೇವಲ ನಾಲ್ಕು ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಹೋದರು. ಅಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಿದರು.
ಬೆಂಗಳೂರಿನ AR ಸಹಾಯದ ಡಬಲ್ ಟೋಟಲ್ ನೀ ರೀಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆಯ ಯಶಸ್ಸು ಮೂಳೆ ಶಸ್ತ್ರಚಿಕಿತ್ಸೆ ಮತ್ತು ರೋಗಿಯ ಕೇಂದ್ರಿತ ಆರೈಕೆಯಲ್ಲಿನ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಈ ಸಾಧನೆಯು ಶಸ್ತ್ರಚಿಕಿತ್ಸಾ ನಿಖರತೆಯ ಪರಿವರ್ತಕ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ಮೂಳೆ ಚಿಕಿತ್ಸೆಯ ಆರೋಗ್ಯಾಭ್ಯಾಸಗಳಲ್ಲಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ.
ಪಿಕ್ಸಿ ಮೆಡಿಕಲ್ ವೈದ್ಯಕೀಯ ತಂತ್ರಜ್ಞಾನದ ಗಡಿಗಳನ್ನು ದಾಟುವುದನ್ನು ಮುಂದುವರಿಸಿದೆ. ರೋಗಿಗಳಿಗೆ ಪರ್ಸನಲೈಸ್ಡ್ ಮತ್ತು ಸುಧಾರಿತ ಶಸ್ತ್ರಚಿಕಿತ್ಸಾ ಅನುಭವವನ್ನು ನೀಡುತ್ತದೆ.
AR ನೆರವಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿನ ಪ್ರಗತಿಗಳು:
ನೈಜ-ಸಮಯದ
ವಿಶ್ಯುವಲೈಸೇಶನ್: ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವಿವರವಾದ ನೈಜ-ಸಮಯದ ಮೊಣಕಾಲಿನ ಪರಿಸ್ಥಿತಿಯ ಪರಿಶೀಲನೆಗೆ ಶಸ್ತ್ರಚಿಕಿತ್ಸಕರು ವಿಶೇಷ AR ಗ್ಲಾಸ್ ಗಳನ್ನು ಬಳಸುತ್ತಾರೆ. ನಿಮ್ಮ ಮೂಳೆ ಮತ್ತು ಹೊಸ ಮೊಣಕಾಲಿನ ಭಾಗಗಳನ್ನು ಜೋಡಿಸಲು ನಿಖರವಾದ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ.
*ಸೂಕ್ರವಾದ ಶಸ್ತ್ರಚಿಕಿತ್ಸಾ ಯೋಜನೆ:* ರೋಗಿಯ ನಿರ್ದಿಷ್ಟ ಮೊಣಕಾಲಿನ ಪರಿಸ್ಥಿತಿಗೆ ಅನುಗುಣವಾಗಿ ಪರ್ಸನಲೈಸ್ಡ್ ಶಸ್ತ್ರಚಿಕಿತ್ಸಾ ಯೋಜನೆಯನ್ನು ರೂಪಿಸಲು AR ನೆರವಾಗುತ್ತದೆ. ಅದೇರೀತಿ ಸುಗಮ ಚೇತರಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
*ಕಾರ್ಯವಿಧಾನದ ಉದ್ದಕ್ಕೂ ಮಾರ್ಗದರ್ಶನ:* AR ಶಸ್ತ್ರಚಿಕಿತ್ಸಾ ಜಿಪಿಎಸ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಖರವಾದ ಕಟ್ ಗಳು, ಹೊಸ ಭಾಗಗಳ ನಿಖರವಾದ ನಿಯೋಜನೆ ಮತ್ತು ಸರಿಯಾದ ಮೊಣಕಾಲಿನ ಸಮತೋಲನವನ್ನು ಕಾಪಾಡಿಕೊಳ್ಳಲು ಹಂತ-ಹಂತದ ಮಾರ್ಗದರ್ಶನವನ್ನು ಒದಗಿಸುತ್ತದೆ.
ಕನಿಷ್ಠ ಇನ್ವೇಸಿವ್ ಸರ್ಜರಿ: AR ಶಸ್ತ್ರಚಿಕಿತ್ಸಕರಿಗೆ ಸಣ್ಣದಾಗಿ ಕತ್ತರಿಸುವ ಕಡೆಗೆ ಮಾರ್ಗದರ್ಶನ ನೀಡುತ್ತದೆ. ಇದರಿಂದಾಗಿ ಅಂಗಾಂಶ ಹಾನಿ, ವೇಗವಾಗಿ ಗುಣಪಡಿಸುವುದು ಮತ್ತು ನೋವು ಕಡಿಮೆಯಾಗುತ್ತದೆ.
*ಇಂಪ್ಲಾಂಟ್ ದೀರ್ಘಾಯುಷ್ಯ:* ಅಂಗಗಳ ನಿಖರವಾದ ನಿಯೋಜನೆ ಮತ್ತು ಸಾಕಷ್ಟು ಸಾಫ್ಟ್ ಟಿಶ್ಯೂಗಳ ಸಮತೋಲನವು ಹೆಚ್ಚಿನ ಕಾರ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಮೊಣಕಾಲು ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು.
ಭವಿಷ್ಯದಲ್ಲಿ ಈ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ದೀರ್ಘಾವಧಿಯ ಅಧ್ಯಯನಗಳ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು