9:11 PM Wednesday4 - March 2026
ಬ್ರೇಕಿಂಗ್ ನ್ಯೂಸ್
ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು

ಇತ್ತೀಚಿನ ಸುದ್ದಿ

ಬೆಂಗಳೂರಿಗೆ ನ್ಯೂಲುಕ್; ಗೋಡೆಗಳ ಮೇಲೆ ಕಲಾವಿದರ ಕೈಚಳಕ; ಹಲವು ಕತೆ ಹೇಳುತ್ತಿರುವ ಚಿತ್ರಪಟಗಳು

15/01/2025, 19:03

ಬೆಂಗಳೂರು(reporterkarnataka.com): ಬೆಂಗಳೂರಿನ 10 ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರಿಂದ ಚಿತ್ತಾರ ಮೂಡಿಸುವ ಕೆಲಸ ಪೂರ್ಣಗೊಂಡಿದೆ.
ಬಿಎಂಆರ್‌ಸಿಎಲ್‌ ಹಾಗೂ ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಸಹಯೋಗದೊಂದಿಗೆ ನಗರದ ಪ್ರಮುಖ 10 ಗೋಡೆಗಳ ಮೇಲೆ ಚಿತ್ರ ಬಿಡಿಸುವ “ಗೋಡೆ ಬೆಂಗಳೂರು” ಉಪಕ್ರಮವನ್ನು ಈ ಹಿಂದೆ ಘೋಷಿಸಲಾಗಿತ್ತು. ಇದೀಗ ಚಿತ್ರಬಿಡುಸವ ಕೆಲಸ ಪೂರ್ಣಗೊಂಡಿದ್ದು, ಬೆಂಗಳೂರಿನ ಈ 10 ಗೋಡೆಗಳು ಸುಂದರವಾಗಿ ಮೂಡಿ ಬಂದಿವೆ.
*ಎಲ್ಲೆಲ್ಲಿ ಚಿತ್ರ:*
ವಿಶ್ವೇಶ್ವರಯ್ಯ ಸೆಂಟ್ರಲ್‌ ಕಾಲೇಜ್‌ ಮೆಟ್ರೋ ಸ್ಟೇಷನ್‌ನ ಗೋಡೆಯ ಮೇಲೆ, “ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳಿ” ಎಂಬ ಶೀರ್ಷಿಕೆಯಡಿ ಬೆಂಗಳೂರಿನ ಜನದಟ್ಟಣೆಯ ಬಗ್ಗೆ ಕಲಾವಿದರಾದ ಅನಿಲ್‌ಕುಮಾರ್‌ ಸುಂದರವಾಗಿ ಚಿತ್ರಬಿಡಿಸಿದ್ದಾರೆ.


ಚರ್ಚ್‌ಸ್ಟ್ರೀಟ್‌ ನಲ್ಲಿರುವ ಗೋಡೆ ಒಂದರ ಮೇಲೆ, ಬಿಡುವಿನ ಸಮಯದಲ್ಲಿ ನಿಮ್ಮೊಂದಿಗೆ ಕಳೆಯಿರಿ ಎಂಬ ಸಂದೇಶ ಸಾರುವ ಚಿತ್ರವನ್ನು ಮನಸೋರೆಗೊಳ್ಳುವಂತೆ ಕಲಾವಿದರಾದ ಅನ್ಪು ವರ್ಕಿ ಅವರು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ನು, ಬೆಂಗಳೂರಿನ ವಲಸೆ ಬರುವ ಸಾವಿರಾರು ಜನ ಇಲ್ಲಿ ಬದುಕಲು ನಡೆಸುವ ಜಿದ್ದಾಜಿದ್ದಿನ ಕಷ್ಟವನ್ನು ವಿವರಿಸುವಂತೆ ಒಬ್ಬ ವ್ಯಕ್ತಿ ಸಿಲೆಂಡರ್‌ ಮೇಲೆ ಮಲಗಿರುವ ಚಿತ್ರದ ಮೂಲಕ ಹೇಳಲಾಗಿದೆ. ಜೆ.ಪಿ.ನಗರದ ಮೆಟ್ರೋ ನಿಲ್ದಾಣದಲಿ ವಿಂಡೋಸ್ ಟು ದಿ ಸೋಲ್ ಶೀರ್ಷಿಕೆಯಲ್ಲಿ ಚಿತ್ರ ಬಿಡಿಸಲಾಗಿದ್ದು, ಮಹಿಳೆಯೊಬ್ಬರ ಕಣ್ಣುಗಳ ಚಿತ್ರ ಇದಾಗಿದೆ. ಜಯನಗರ ಮೆಟ್ರೋ ನಿಲ್ದಾಣದ ಗೋಡೆ ಮೇಲೆ ಈ ಹಿಂದೆ ಇದ್ದ ಬೆಂಗಳೂರಿನ ನೈಜತೆಯ ಬಗ್ಗೆ ಚಿತ್ರಿಸಲಾಗಿದೆ, ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಲ್ಲಿ ಹಳೆಯ ವಿಂಟೇಜ್ ಪೋಸ್ಟರ್‌ಗಳು ಮತ್ತು ಮ್ಯಾಚ್‌ಬಾಕ್ಸ್ ಚಿತ್ರಗಳಿಂದ ಪ್ರೇರಿತವಾದ ಕಲಾಕೃತಿಯನ್ನು ಬಿಡಿಸಲಾಗಿದೆ. ಸೈನ್ಸ್‌ ಗ್ಯಾಲರಿ ರಸ್ತೆಯ ಗೋಡೆಗಳ ಮೇಲೆ ರಂಗೋಲಿ ಚಿತ್ತಾರ, ಯಶವಂತಪುರ ಮೆಟ್ರೋಸ್ಟೇಷನ್‌ನಲ್ಲಿ ದೇಹದ ಭಾಗಗಳ ಕುರಿತು ವಿವರಿಸುವ ಚಿತ್ರ, ಹಲಸೂರು ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಳ್ಳೋಗಾಡಿ ತಳ್ಳುವ ಸಾಗುವ ಚಿತ್ರವನ್ನು ಬಿಡಿಸಲಾಗಿದೆ. ಒಟ್ಟಾರೆ 10 ಗೋಡೆಗಳ ಮೇಲೆ ವಿವಿಧ ವಿಷಯಗಳನ್ನಾಧರಿಸಿ, ಬೃಹತ್‌ ಗಾತ್ರದಲ್ಲಿ ಚಿತ್ರ ಬಿಡಿಸಿದ್ದು, ಈ ಚಿತ್ರಗಳು ನಗರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ,

ಇತ್ತೀಚಿನ ಸುದ್ದಿ

ಜಾಹೀರಾತು