ಇತ್ತೀಚಿನ ಸುದ್ದಿ
ಬೆಳ್ತಂಗಡಿ: ಅಜ್ಜಿ ಮನೆಗೆ ಬಂದು ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು; ಮೃತದೇಹ ಪತ್ತೆ
21/02/2022, 15:01
ಬೆಳ್ತಂಗಡಿ(reporterkarnataka.com): ಮುಂಡಾಜೆಯಲ್ಲಿ ಸ್ನಾನಕ್ಕೆಂದು ಹೋಗಿದ್ದ ಯುವಕನೋರ್ವ ನದಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ
ಮೃತ ಯುವಕನನ್ನು ಕಿರಣ್ (20) ಎಂದು ಗುರುತಿಸಲಾಗಿದೆ. ಕಿರಣ್ ತನ್ನ ಅಜ್ಜಿಮನೆ ಮುಂಡಾಜೆಯ ಪರಮುಖಕ್ಕೆ ಬಂದಿದ್ದ. ಭಾನುವಾರ ಸಂಜೆಯ ವೇಳೆ ಸಹೋದರನ ಜೊತೆ ನದಿಗೆ ಸ್ನಾನಕ್ಕೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ಭೇಟಿ ನೀಡಿದ್ದು, ಇದೀಗ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.