ಇತ್ತೀಚಿನ ಸುದ್ದಿ
ಬೆಳ್ಳಾರೆಗೆ ಪ್ರತಿಪಕ್ಷ ಉಪ ನಾಯಕ ಖಾದರ್ ಭೇಟಿ: ಹತ್ಯೆಗೀಡಾದ ಮಸೂದ್, ಪ್ರವೀಣ್ ಕುಟುಂಬಕ್ಕೆ ಸಾಂತ್ವನ
29/07/2022, 22:02

ಬೆಳ್ಳಾರೆ(reporterkarnataka.com):
ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್ ಮನೆಗೆ ಭೇಟಿ
ನೀಡಿದ ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ ನೆಟ್ಟಾರು ಅವರ ಪತ್ನಿ ಮತ್ತು ಹೆತ್ತವರಿಗೆ ದೂರವಾಣಿ ಮೂಲಕ ಸಾಂತ್ವನ ತಿಳಿಸಿದರು.
ಬೆಂಗಳೂರಿನಿಂದ ಶುಕ್ರವಾರ ಮುಂಜಾನೆ ಮಂಗಳೂರಿಗೆ ಆಗಮಿಸಿದ ಯು.ಟಿ.ಖಾದರ್ ಅವರು ಕಳೆದ ವಾರ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಹತ್ಯೆಯಾಗಿದ್ದ ಮಸೂದ್ ಅವರ ಮನೆಗೆ ಹಾಗೂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಇನ್ನೋರ್ವ ಪ್ರವೀಣ ನೆಟ್ಟಾರುರವರ ಮನೆಗೂ ಕೂಡಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಭೇಟಿ ನೀಡಬೇಕಿತ್ತಾದರೂ ಅವರ ಪತ್ನಿ ಮತ್ತು ಹೆತ್ತವರು ವಿಶ್ರಾಂತಿಯಲ್ಲಿರುವುದರಿಂದ ನೆಟ್ಟಾರು ಅವರ ಚಿಕ್ಕಪ್ಪ ವಿಶ್ವನಾಥ ಅವರಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ತಿಳಿಸಿದರು. ಕಳೆದ ಎರಡು ದಿನಗಳಿಂದ ಸತತ ನಾಯಕರು ಇತರರ ಭೇಟಿಯಿಂದಾಗಿ ಪ್ರವೀಣ ನೆಟ್ಟಾರು ಅವರ ಪತ್ನಿ ಹಾಗೂ ಹೆತ್ತವರು ವಿಶ್ರಾಂತಿಯಲ್ಲಿದ್ದು ತಾವು ಕರೆ ಮಾಡಿ ಸಾಂತ್ವನ ತಿಳಿಸಿದ್ದು ಮನೆಗೆ ಭೇಟಿ ನೀಡಿದ್ದಷ್ಟೆ ತೃಪ್ತಿಯಾಯಿತೆಂದು ಈ ಸಂದರ್ಭದಲ್ಲಿ ಪ್ರವೀಣ್ ಅವರ ಚಿಕ್ಕಪ್ಪ ವಿಶ್ವನಾಥ ಅವರು ಖಾದರ್ ರವರಿಗೆ ತಿಳಿಸಿದರು.