ಇತ್ತೀಚಿನ ಸುದ್ದಿ
ಬೆಳ್ಳಾರೆ: ಮಗು ಜತೆ ಪುತ್ರಿ ಆತ್ಮಹತ್ಯೆ ಪ್ರಕರಣ: ಶಂಕೆ ವ್ಯಕ್ತಪಡಿಸಿ ತಂದೆ ಪೊಲೀಸರಿಗೆ ದೂರು
05/01/2026, 16:18
ಪುತ್ತೂರು(reporterkarnataka.com): ಮಗುವಿನೊಂದಿಗೆ ತಾಯಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರು ತಾಲೂಕಿನ ರುಕ್ಮಯ್ಯ ಗೌಡ ಎಂಬವರು ತನ್ನ ಮಗಳು(34) ಆಕೆಯ ಮಗುವಿನೊಂದಿಗೆ(3) ಕೆರೆಗೆ ಹಾರಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ದೂರಿನ ಅನ್ವಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಭಾನುವಾರ ಅ.ಕ್ರ: 01/2026 ಕಲಂ: 103 BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ತನ್ನ ಮಗಳ ಮರಣದಲ್ಲಿ ಸಂಶಯವಿದೆ ಎಂದು ಪಿರ್ಯಾಧಿದಾರರಾದ ರತ್ನಾವತಿ (55) ಪುತ್ತೂರು ತಾಲೂಕು ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಿನಾಂಕ 4.1.20260ರಂದು ಯು.ಡಿ.ಆರ್ ನಂಬ್ರ 01/2026 ಕಲಂ: 194(3)(i)(iv) BNSS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಘಟನೆಗೆ ಸಂಬಂಧಿಸಿದಂತೆ ಮೇಲಿನ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.














