ಇತ್ತೀಚಿನ ಸುದ್ದಿ
ಬೆಳಗಾವಿ ಸುವರ್ಣ ಸೌಧ ಮುತ್ತಿಗೆ: ಮೂಡಲಗಿಯ ಹಳ್ಳೂರು ಗ್ರಾಮದಿಂದ 50 ಸಾವಿರ ರೊಟ್ಟಿ ಬುತ್ತಿ!!
21/12/2022, 19:55

ಬೆಳಗಾವಿ(reporterkarnataka.com): ಪಂಚಮಸಾಲಿ ಮೀಸಲಾತಿ ಒತ್ತಾಯಿಸಿ ನಾಳೆ ಬೆಳಗಾವಿಯ ಸುವರ್ಣ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕು ಹಳ್ಳೂರು ಗ್ರಾಮದಿಂದ 50,000 ರೊಟ್ಟಿ ಬುತ್ತಿಗಳ ಜತೆಗೆ ನಿಂಗಪ್ಪ ಪಿರೋಜಿ , ಆರ್. ಕೆ. ಪಾಟೀಲ್, ದೀಪಕ್ ಜುಂಜುರವಾದ, ಗುಂಡು ಪಾಟೀಲ್ ರಾಮನಗೌಡ ಅವರ ನೇತೃತ್ವದ ತಂಡ ಈಗಾಗಲೇ ಪಾದಯಾತ್ರೆ ಆರಂಭಿಸಿದೆ.
ಗುರುವಾರ ಬೆಳಗಾವಿಯ ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.ಪಂಚಮಸಾಲಿ ಸಮಾಜದ ಗುರುಗಳಾದ ಕೂಡಲಸಂಗಮಪೀಠದ ಶ್ರೀ ಬಸವ ಜಯಂತಿ ಮೃತ್ಯುಂಜಯ ಮಹಾಸ್ವಾಮಿಗಳು, ರಾಷ್ಟ್ರೀಯ ಘಟಕ, ರಾಜ್ಯ ಘಟಕ, ಜಿಲ್ಲಾ ಘಟಕ, ತಾಲೂಕು ಘಟಕ, ಗ್ರಾಮ ಘಟಕ, ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಆರ್ ವಿ ಅಶೋಕ್ ಗೋಪನಾಳ ಅವರು ಆಗಮಿಸಿದ್ದಾರೆ.