ಇತ್ತೀಚಿನ ಸುದ್ದಿ
ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ
28/04/2024, 13:05
ಬೆಳಗಾವಿ(reporterkarnataka.com): ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ
ಬೆಳಗಾವಿಗೆ ಶನಿವಾರ ರಾತ್ರಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿಯ ಊಟದಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿಯ ಸವಿದರು.
ಕಾಕತಿ ಬಳಿ ಇರುವ ಅಣ್ಣಾ ಸಾಹೇಬ ಜೊಲ್ಲೆ ಒಡೆತನದ ಐಟಿಸಿ ವೆಲ್ ಕಮ್ ಹೊಟೆಲ್ ನಲ್ಲಿ ವಾಸ್ತವ್ಯ ಮಾಡಿರುವ ಪ್ರಧಾನಿ ಅವರಿಗೆ ವಿಶೇಷ ಬಾಣಸಿಗರಿಂದ ಉತ್ತರ ಕರ್ನಾಟಕ ಶೈಲಿಯ ಊಟ ತಯಾರಿಸಲಾಗಿತ್ತು. ಪಲ್ಯ, ಚಟ್ನಿಯೊಂದಿಗೆ ಪ್ರಧಾನಿ ಅವರಿಗೆ ಜೋಳರೊಟ್ಟಿ ಸಿದ್ಧಪಡಿಸಲಾಗಿತ್ತು.
ಪ್ರಧಾನಿ ಮೋದಿ ಅವರು ಶನಿವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದು, ಐಟಿಸಿ ವೆಲ್ ಕಮ್ ಹೊಟೆಲ್ ನಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದಾರೆ.