2:17 AM Sunday5 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಬೆಳಗಾವಿ: ಭಾರಿ ಗಾಳಿ ಮಳೆ; ಮರ, ಲೈಟ್ ಕಂಬಗಳು ಧರಾಶಾಯಿ; ದ್ರಾಕ್ಷೆ ಬೆಳೆಗೆ ಅಪಾರ ಹಾನಿ, ಕಂಗಾಲಾದ ರೈತರು 

09/04/2022, 23:09

ಬೆಳಗಾವಿ(reporterkarnataka.com): ಜಿಲ್ಲೆಯ ಹಲವೆಡೆ ಶನಿವಾರ ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಹಲವು ಮರ ಹಾಗೂ ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ.

ಗಾಳಿ ಸಮೇತ ಮಳೆಯಾಗುವುದರಿಂದ ಮುಖ್ಯ ಬಸ್ ನಿಲ್ದಾಣ ಎದುರುಗಡೆ ಇರುವ ಸಿಂಗನಲದ ಕರೆಂಟ್ ಕಂಬಗಳಿಗೆ ಹಾಕಿರುವ ಜಾಹೀರಾತು ಬ್ಯಾನರ್ ಗಳು ಹರಿದು ಹೋಗಿವೆ. ಬ್ಯಾನರ್ ತುಂಡುಗಳು ಗಾಳಿಗೆ ಹಾರಿ ವಿದ್ಯುತ್ ವಯರ್ ಗಳಿಗೆ ತಾಗಿ ಶಾರ್ಟ್ ಸರ್ಕಿಟ್ ಆಗುವ ದೃಶ್ಯ ಕಂಡು ಬಂತು. ಅಲ್ಲಲ್ಲಿ ಮರಗಳು ಉರುಳಿ ಅಂಗಡಿ ಮುಂಗಟ್ಟುಗಳಿಗೆ ಹಾನಿ ಸಂಭವಿಸಿದೆ. 

ಬೆಳಗಾವಿ, ನಿಪ್ಪಾಣಿ, ಅಥಣಿ ಮುಂತಾದ ತಾಲೂಕುಗಳಲ್ಲಿ ಭಾರಿ
ಮಳೆಯಾಗಿದೆ. ಅಥಣಿ ತಾಲೂಕಿನ ಐಗಳಿ,ತೆಲಸಂಗ,ಕೋಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ  ಬಾರಿ ಅಕಾಲಿಕ ಗಾಳಿ ಮಳೆ ಸುರಿದಿದೆ.  ಗಾಳಿ ರಭಸಕ್ಕೆ ಗಿಡ,  ಮರಗಳು  ಹಾಗೂ   ಲೈಟ್ ಕಂಬಗಳು  ಉರಳಿವೆ. ಇನ್ನೂ  ಐಗಳಿ.ತೆಿಲಸಂಗ ಕೋಹಳ್ಳಿ ಗ್ರಾಮದ ರೈತರು ಐಗಳಿ ದ್ರಾಕ್ಷಿ  ಸಂಸ್ಕರಣಾ ಘಟಕದ ಸಮೀಪ ಇರುವ ಶೇಡ್ ಗಳಲ್ಲಿ ತುಂಬಿದ ದ್ರಾಕ್ಷಿ  ಹಣ್ಣುಗಳು ಮಳೆಗೆ ಸಂಪೂರ್ಣ ವಾಗಿ  ತೊಯ್ದು ನಾಶವಾಗಿವೆ.   ರೈತರು ವರ್ಷವಿಡಿ   ದುಡಿದು ಕೊನೆಯ ಹಂತದಲ್ಲಿ ಅಪಾರವಾದ ನಷ್ಟ ಅನುಭವಿಸುವಂತಾಗಿದೆ.


ಇದರಿಂದ ರೈತರು ಕಂಗಾಲ ಆಗಿದ್ದಾರೆ  ಸಾವಿರಾರು ರೂ. ಸಾಲ ಮಾಡಿ ಖರ್ಚು ಮಾಡಿ ಬೆಳೆದ  ಬೆಳೆ  ಕೈಗೆ  ಬಾರದೆ ಇರುವುದು   ರೈತರ ಕಣ್ಣಲ್ಲಿ ನೀರು ತರಿಸಿದೆ  ಇದಕ್ಕೆ ಸರ್ಕಾರ  ಕೂಡಲೇ  ಪರಿಹಾರ   ನೀಡಬೇಕು  ಎಂದು ರೈತರು  ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು