ಇತ್ತೀಚಿನ ಸುದ್ದಿ
ಬೆಳ್ತಂಗಡಿಯ ಸಿಯೋನ್ ಅನಾಥಶ್ರಮದಲ್ಲಿ ಕೊರೊನಾ ಸ್ಫೋಟ: ಕೋವಿಡ್ ಸೆಂಟರ್ ಗೆ ಸ್ಥಳಾಂತರ
30/05/2021, 19:49
ಬೆಳ್ತಂಗಡಿ(reporterkarnataka news): ಇಲ್ಲಿನ ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಿಯೋನ್ ಅನಾಥಶ್ರಮದಲ್ಲಿ ಕೊರೊನಾ ಸ್ಫೋಟಗೊಂಡಿದೆ.
ಆಶ್ರಮದಲ್ಲಿ ಒಟ್ಟು 270 ಮಂದಿ ಇದ್ದು, ಅವರನ್ನು ಧರ್ಮಸ್ಥಳದಲ್ಲಿರುವ ರಜತಾದ್ರಿ ಕೋವಿಡ್ ಸೆಂಟರ್ ಗೆ ವರ್ಗಾಯಿಸಲಾಗಿದೆ. ಸ್ಥಳೀಯ ಶಾಸಕ ಹರೀಶ್ ಪೂಂಜ ಅವರು ಆಶ್ರಮ ನಿವಾಸಿಗಳನ್ನು ಕೋವಿಡ್ ಸೆಂಟರ್ ಗೆ ವರ್ಗಾಯಿಸುವ ಕಾರ್ಯದ ನೇತೃತ್ವವನ್ನು ವಹಿಸಿದ್ದರು.
ಆಶ್ರಮದಲ್ಲಿ ಅನಾಥ ವೃದ್ಧರು ಹಾಗೂ ಮನೋರೋಗಿಗಳು ಆಶ್ರಯ ಪಡೆದಿದ್ದಾರೆ.