ಇತ್ತೀಚಿನ ಸುದ್ದಿ
ಬೆಳಗಾವಿ ಅಧಿವೇಶನ: ಸಂಸತ್ತಿಗೆ ಆಯ್ಕೆಯಾದ ಇಬ್ಬರು ಮಾಜಿ ಸಿಎಂಗಳಿಗೂ ಆಸನದ ವ್ಯವಸ್ಥೆ!
09/12/2024, 23:41

ಬೆಳಗಾವಿ(reporterkarnataka.com): ರಾಜ್ಯ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದ ಇಬ್ಬರು ನೂತನ ಶಾಸಕರಿಗೆ ಆಸನದ ವ್ಯವಸ್ಥೆ ಮಾಡುವ ಬದಲು ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಆಸನ ವ್ಯವಸ್ಥೆ ಮಾಡಿ ಎಡವಟ್ಟು ಮಾಡಿಕೊಂಡ ಘಟನೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಡೆದಿದೆ. ಇತ್ತೀಚೆಗೆ ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಯಲ್ಲಿ ಗೆದ್ದಿರುವ ನೂತನ ಶಾಸಕರಿಗೆ ಆಸನ ವ್ಯವಸ್ಥೆಯನ್ನು ಮಾಡಬೇಕಿತ್ತು. ಆದರೆ, ಈ ವಿಚಾರದಲ್ಲಿ ಎಡವಟ್ಟು ಆಗಿದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ, ನೂತನ ಸಂಸದರಾಗಿರುವ ಇಬ್ಬರು ಮಾಜಿ ಸಿಎಂಗಳಿಗೂ ಆಸನ ಮೀಸಲಿರಿಸಲಾಗಿದೆ.
ಸುವರ್ಣ ವಿಧಾನಸಭೆಯಲ್ಲಿ ಮಾಜಿ ಶಾಸಕರ ಹೆಸರಿನಲ್ಲಿ ಆಸನ ಮೀಸಲಾಗಿಟ್ಟು ಬೆಳಗಾವಿ ಜಿಲ್ಲಾಡಳಿತ ನಗೆಪಾಟಿಲಿಗೀಡಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಹೆಸರಲ್ಲಿ ಆಸನಗಳು ಮೀಸಲಿರಿಸಲಾಗಿವೆ.