ಇತ್ತೀಚಿನ ಸುದ್ದಿ
ಬೆಳಗಾವಿ ಜಿಲ್ಲೆಯ 3 ಕಡೆ ಎಸಿಬಿ ದಾಳಿ: ಹೆಸ್ಕಾಂ ಅಧಿಕಾರಿ ಮನೆಯಲ್ಲಿ ವಿದೇಶಿ ಕರೆನ್ಸಿ ಪತ್ತೆ
24/11/2021, 14:05
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಸವಿ ನಿದ್ರೆಯಲ್ಲಿದ್ದ ಜಿಲ್ಲೆಯ ಮೂರು ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನೇತಾಜಿ ಪಾಟೀಲ್ ಎಂಬ ಅಧಿಕಾರಿ ಮನೆಯಲ್ಲಿ ದಾಳಿ ವೇಳೆ ಡಾಲರ್ ನೋಟುಗಳು ಪತ್ತೆಯಾಗಿವೆ.
ಜಿಲ್ಲೆಯ ಮೂರು ಕಡೆ ದಾಳಿ ನಡೆದಿದ್ದು. ಬೆಳಗಾವಿ ಹೆಸ್ಕಾಂ ತಾಂತ್ರಿಕ ಸಹಾಯಕ ಅಧಿಕಾರಿ ನೇತಾಜಿ ಪಾಟೀಲ್, ಬೈಲಹೊಂಗಲದಲ್ಲಿ ಸಹಾಯಕ ಅಭಿವೃದ್ಧಿ ಅಧಿಕಾರಿ ಎ.ಕೆ.ಮಸ್ತಿ ಹಾಗೂ ಗೋಕಾಕ್ ಸಾರಿಗೆ ಇಲಾಖೆ ಅಧಿಕಾರಿ ಸದಾಶಿವ ಮರಿಲಿಂಗಣ್ಣವರ್ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಬೆಳಗಾವಿ ಹೆಸ್ಕಾಂ ತಾಂತ್ರಿಕ ಸಹಾಯಕ ಅಧಿಕಾರಿ
ನೇತಾಜಿ ಪಾಟೀಲ್ ಎಂಬ ಅಧಿಕಾರಿ ಮನೆಯಲ್ಲಿ ದಾಳಿ ವೇಳೆ ಡಾಲರ್ ಪತ್ತೆಯಾಗಿವೆ.
ಈ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು ದಾಳಿ ನಂತರ ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ.