ಇತ್ತೀಚಿನ ಸುದ್ದಿ
ಬೀದರ್ ದಕ್ಷಿಣ ಕ್ಷೇತ್ರ: ಹಲವು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ
24/03/2023, 01:16
ಬೀದರ್(reporterkarnataka.com):
ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಖಾಶೇಂಪೂರ ಅತಿಥ ಗೃಹದಲ್ಲಿ ಹಲವು ಮಂದಿ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಸೇರ್ಪಡೆಗೊಂಡರು.
ಶಾಸಕ ಬಂಡೇಪ್ಪ ಖಾಶೇಂಪೂರ ಮಾಡುವ ಅಭಿವೃದ್ಧಿ ಕಾರ್ಯಗಳು ಹಾಗೂ ಜೆಡಿಎಸ್ ಪಕ್ಷದ ಪಂಚ ರತ್ನ ಯೋಜನೆಯನ್ನು ಮೆಚ್ಚಿ ಶಾಸಕರ ಖಾಶೇಂಪೂರ ಅಥಿತಿ ಗೃಹದಲ್ಲಿ ಬಂಬಳಗಿ ಗ್ರಾಮ ಪಂಚಾಯತ ಸದಸ್ಯ ಪ್ರಕಾಶ್ ಭಾಲೆ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಪುಟರಾಜ್ ರೇಕುಳಗಿ, ಬೋಮಗೋಂಡ್ ಚಿಟ್ಟಾವಾಡಿ ಎಸ್.ಟಿ.ಘಟಕದ ಜಿಲ್ಲಾ ಅದ್ಯಕ್ಷರು.ಹಾಗೂ ಜೆಡಿಎಸ್ ಯುವ ಘಟಕದ ಅದ್ಯಕ್ಷ ರೇವಣ ಸಿದ್ದಪ್ಪ ಬಾವಗಿ ಸಿರಕಟನಳ್ಳಿ.ಕ್ರಿಸ್ಟೋಫರ್ ಎಸ್ ರೇಕುಳಗಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.














