9:39 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಬಿ.ಸಿ.ರೋಡು: ಡಿ. 20ರಿಂದ ಜನವರಿ 5ರವರೆಗೆ ಕರಾವಳಿ ಕಲೋತ್ಸವ ಮತ್ತು ಬಹುಸಂಸ್ಕೃತಿ ಸಂಭ್ರಮ

19/12/2024, 23:55

ಬಂಟ್ವಾಳ(reporterkarnataka.com): ಕರಾವಳಿ ಕಲೋತ್ಸವ 2024-25 ಬಹುಸಂಸ್ಕೃತಿ ಸಂಭ್ರಮ ಡಿಸೆಂಬರ್ 20ರಿಂದ ಜನವರಿ 5ರವರೆಗೆ ಬಿ.ಸಿ. ರೋಡ್ ನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ ಮೈದಾನದಲ್ಲಿ ನಡೆಯಲಿದೆ. ಎಂದು ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.
ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್, ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಮತ್ತು ಬಹುಭಾಷಾ ಕವಿ ಸಂಗಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಬಂಟ್ವಾಳ ತಾಲೂಕಿನಲ್ಲಿ ಯಕ್ಷಗಾನ, ಭರತನಾಟ್ಯ, ಸಂಗೀತ , ಜಾನಪದ ನೃತ್ಯ, ಚಿತ್ರಕಲೆ, ನಾಟಕ ತರಬೇತಿ ಚಟುವಟಿಕೆಗಳನ್ನು ಕಳೆದ 25 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನಡೆಸಿಕೊಂಡು ಬರುತ್ತಿರುವ ಚಿಣ್ಣರ ಲೋಕದ ವಾರ್ಷಿಕ ವಿಶೇಷ ಕಾರ್ಯಕ್ರಮವೇ ಕರಾವಳಿ ಕಲೋತ್ಸವ. ಈ ವರ್ಷ ಡಿ.20ರಂದು ಉದ್ಘಾಟನೆಗೊಳ್ಳಲಿದೆ. ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟನೆ ವಿವಿಧ ಮಳಿಗೆಗಳ ಉದ್ಘಾಟನೆ, ಸಾಧನಾ ಪ್ರಶಸ್ತಿ, ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಒಳಗೊಂಡಂತೆ ವಿವಿಧ ಪ್ರಶಸ್ತಿ ಹಾಗೂ ಸನ್ಮಾನಗಳು ಮೊಗರ್ನಾಡು ಕೀರ್ತಿಶೇಷ ರಘು ಸಪಲ್ಯ ಕಲಾವೇದಿಕೆ ಮತ್ತು ದಿ. ಫಾರೂಕ್ ಗೂಡಿನಬಳಿ ಸಭಾಂಗಣದಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 29ರಂದು ಸರಪಾಡಿ ಅಶೋಕ ಶೆಟ್ಟಿಯವರ ಯಕ್ಷಪಯಣದ 50ರ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ. ಡಿ.30ರಂದು ಬಹುಭಾಷಾ ಕವಿ ಸಂಗಮವು ಮೋಹನ್ ದಾಸ ಕೊಟ್ಟಾರಿ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಕವಿತಾ ವಾಚನ ಮಾಡುವ ಕವಿಗಳು ಕನ್ನಡ : ಜಯಾನಂದ ಪೆರಾಜೆ , ತುಳು: ವಿಜಯ ಬಿ.ಶೆಟ್ಟಿ ಸಾಲೆತ್ತೂರು. ಕೊಂಕಣಿ: ಸಲೋಮಿ ಡಿಸೋಜ ಮೊಗರ್ನಾಡು, ಬ್ಯಾರಿ: ಅಶ್ರಫ್ ಅಪೋಲೊ, ಅರೆಭಾಷೆ: ಉದಯ ಭಾಸ್ಕರ್ ಸುಳ್ಯ, ಕೊಡವ: ಕ್ಯಾಪ್ಟನ್ ಬಿದ್ದಂಡ ನಾನಿ ದೇವಯ್ಯ, ಕೊರಗ: ಸಂದೀಪ್ ಕೋಡಿಕಲ್ , ನಿರ್ವಹಣೆ : ಎಚ್. ಕೆ. ನಯನಾಡು.
ಡಿ. 21ರಂದು ಸಂಜೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿಯನ್ನು ಡಾ. ಮೋಹನ್ ಆಳ್ವ ಮೂಡಬಿದಿರೆ ಅವರಿಗೆ ಪ್ರದಾನ ಮಾಡಲಾಗುವುದು. ಡಿ.22ರಂದು ರಾಜ್ಯಮಟ್ಟದ ಸಂಗೀತ ಸ್ಫರ್ಧೆ, ಡಿ.23ರಂದು ಶಿವದೂತೆ ಗುಳಿಗೆ ನಾಟಕ, ಡಿ.24ರಂದು ಬ್ಯಾರಿ ಮಲಯಾಳಂ ಸಂಗೀತ ರಸಮಂಜರಿ, ಡಿ.25ರಂದು ಗಾನ ನೃತ್ಯ ಸಂಭ್ರಮ, ಡಿ.26 ರಂದು ನೃತ್ಯ ಸಿಂಚನ ,ಕರಾವಳಿ ಚೆಂಡೆ ವಾಯುಲಿನ್ ವಾದನ, ಡಿ. 27 ರಂದು ತುಳು ನಾಟಕ ಗೆಂದಗಿಡಿ, ಡಿ. 28ರಂದು ಕರಾವಳಿ ಸರಿಗಮಪ,ಡಿ. 29 ರಂದು ಮಹಾಸಂಶಕ್ತರು ಯಕ್ಷಗಾನ ಬಯಲಾಟ, ಡಿ. 30 ರಂದು ಯಕ್ಷನಾಟ್ಯ ವೈಭವ, ಕಂಗೀಲು ನೃತ್ಯ, ಕೊಂಕಣಿ ನೃತ್ಯ, ಧಪ್ ನೃತ್ಯ, ಅರೆಭಾಷೆ ನೃತ್ಯ ವೈಭವ , 31ರಂದು ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ ನಡೆಯಲಿದೆ.
2025 ಜನವರಿ 1ರಂದು ಸಂಜೆ 6.00 ರಿಂದ ಕುಣಿತ ಭಜನೆ , ಭರತನಾಟ್ಯ ನೃತ್ಯ ವೈಭವ, 2ರಂದು ಹಾಸ್ಯ ನಾಟಕ ತೆಲಿಪುವರ ಅತ್ತ್ ಬುಲಿಪುವರ, 3ರಂದು ಮಾಪುಲೆ ಪಾಟ್, 4 ರಂದು ಡ್ಯಾನ್ಸ್ ಕರಾವಳಿ ಫಿಲ್ಮ್ ಡ್ಯಾನ್ಸ್ , 5 ರಂದು ಸಮಾರೋಪ ಸಮಾರಂಭ ಹಾಗೂ ಶನಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಮಿತಿ ಸಂಚಾಲಕ ಮೋಹನ್‌ದಾಸ್ ಕೊಟ್ಟಾರಿ ಮುನ್ನೂರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು