ಇತ್ತೀಚಿನ ಸುದ್ದಿ
BCC | ಬಳ್ಳಾರಿ ಪಾಲಿಕೆ ನೀರು ಸರಬರಾಜು ವಿಭಾಗದ ನೌಕರರ ಪ್ರತಿಭಟನೆ: ಬೇಡಿಕೆ ಈಡೇರಿಕೆಗೆ ಆಗ್ರಹ
07/03/2025, 12:04

ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ನೀರು ಸರಬರಾಜು ಮಾಡುವ ವೃತ್ತಿಯಲ್ಲಿ ತೊಡಗಿರುವ ನೌಕರರನ್ನು ಪೌರ ಕಾರ್ಮಿಕರ ರೀತಿಯಲ್ಲೇ ‘ಡಿ’ ವೃಂದಕ್ಕೆ ಪರಿಗಣಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ‘ನೀರು ಸರಬರಾಜು ಮತ್ತು ದುರಸ್ತಿ ಕಾರ್ಮಿಕರ ಸಂಘ’ದ ಸದಸ್ಯರು ನಡೆಸುತ್ತಿರುವ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆರಂಭಿಸಿದ್ದ ಕಾರ್ಮಿಕರು ಮಂಗಳವಾರ 3ನೇ ದಿನವೂ ಮುಂದುವರಿಸಿದರು.
‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಸೇವೆ ಕಾಯಂ ಮಾಡಬೇಕು’ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಗೆ ಬಿಜೆಪಿಯ ಕೆಲ ಕಾರ್ಪೊರೇಟರ್‌ಗಳು, ಸಾಮಾಜಿಕ ಹೋರಾಟಗಾರರು ಮತ್ತು ಸಂಘ–ಸಂಸ್ಥೆಯ ಮುಖಂಡರು ಬೆಂಬಲ ನೀಡಿದರು.
ಈ ವೇಳೆ ಮಾತನಾಡಿದ ಸಂಘದ ಪ್ರಮುಖರು, ‘ಆಯುಕ್ತರು ಭೇಟಿಯಾಗಿದ್ದರು. ನೇರ ನೇಮಕಾತಿ ಮಾಡಿಕೊಳ್ಳಬೆಕು. ನಮ್ಮ ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದರು.