ಇತ್ತೀಚಿನ ಸುದ್ದಿ
ಭಟ್ಕಳ ಎಸ್ ಬಿಐ ಶಾಖೆಯಲ್ಲಿ 1.50 ಕೋಟಿ ಅವ್ಯವಹಾರ: ಮಂಗಳೂರು ಮೂಲದ ಮೆನೇಜರ್ ನಾಪತ್ತೆ
23/04/2022, 21:52
ಭಟ್ಕಳ(reporterkarnataka.com):
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಟ್ಕಳ ಬಝಾರ್ ಶಾಖೆಯಲ್ಲಿ 1.50 ಕೋಟಿ ಅವ್ಯವಹಾರ ನಡೆಸಿದ ಆರೋಪಿ ಮಂಗಳೂರು ಮೂಲದ ಬ್ಯಾಂಕ್ ಮೆನೇಜರ್ ನಾಪತ್ತೆಯಾಗಿದ್ದಾರೆ.
ಮಂಗಳೂರಿನ ಕಾವೂರು ನಿವಾಸಿಯಾದ ಅನುಪ್ ದಿನಕರ ಪೈ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಸ್ ಬಿಐನ ಬಜಾರ್ ಶಾಖೆಯಲ್ಲಿ 2019ರಿಂದ 2022ರ ಏಪ್ರಿಲ್ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ. ಈ ಕುರಿತು ಪ್ರಸ್ತುತ ಬಝಾರ್ ಶಾಖೆಯ ಮೆನೇಜರ್ ರಾಘವೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ಯಾಂಕ್ ಶಾಖೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲಧಿಕಾರಿಗಳ ತಪಾಸಣೆಯಿಂದ ಕೂಡ ಬಹಿರಂಗವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿ ದಿನಕರ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.