ಇತ್ತೀಚಿನ ಸುದ್ದಿ
ಬರ ಪರಿಸ್ಥಿತಿ: ಬೆಳೆ ಪರಿಹಾರ ಘೋಷಣೆ; ಸಹಾಯವಾಣಿ ಸಂಪರ್ಕಿಸಲು ಕೋರಿಕೆ
19/05/2024, 10:44
ಮಂಗಳೂರು(reporterkarnataka.com): 2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿಯ ಹಿನ್ನಲೆಯಲ್ಲಿ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆಹಾನಿ ಪರಿಹಾರವಾಗಿ ಅರ್ಹತೆಗೆ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಟ ರೂ.2000/ ವರೆಗೆ ಪರಿಹಾರ ಪಾವತಿಸಲು ಸರ್ಕಾರ ಆದೇಶಿಸಿದೆ.
ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರೂಟ್ಸ್ ಐಡಿ ಹೊಂದಿರುವ, ಪಹಣೆ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರ ಪಾವತಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಬೆಳೆಹಾನಿ ಪರಿಹಾರ ಪಾವತಿಗೆ ಸಹಾಯವಾಣಿ:
ಜಿಲ್ಲಾಧಿಕಾರಿಗಳ ಕಚೇರಿ, ದೂ.ಸಂಖ್ಯೆ: 0824-2442590, 1077, ಮಂಗಳೂರು ಉಪವಿಭಾಗಾಧಿಕಾರಿಗಳ ಕಚೇರಿ ದೂ.ಸಂಖ್ಯೆ 0824-2220569, ಮಂಗಳೂರು ತಾಲ್ಲೂಕು ಕಚೇರಿ ದೂ.ಸಂಖ್ಯೆ: 0824-2220587, ಮೂಡಬಿದ್ರೆ ತಾಲ್ಲೂಕು ಕಚೇರಿ ದೂ.ಸಂಖ್ಯೆ: 08258-238100 ಅನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದ್ದಾರೆ.