1:49 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಭಾವೈಕ್ಯದ ಪ್ರತೀಕ ಎಂದೇ ಪ್ರಸಿದ್ಧರಾದ ಬ್ಯಾಷ್ಠಿಸ್ಟ್ ಡಿ’ಕುನ್ಹಾ ಇನ್ನಿಲ್ಲ: ನಾಳೆ ಬೆಂದೂರುನಲ್ಲಿ ಅಂತ್ಯಕ್ರಿಯೆ

21/05/2025, 21:27

ಮಂಗಳೂರು(reporterkarnataka.com): ಬಿಕರ್ಣಕಟ್ಟೆ ಜಯಶ್ರೀಗೇಟ್ ಇಲ್ಲಿನ ಹೋಲಿ ಫ್ಯಾಮಿಲಿ ನಿವಾಸಿ, ಬಂಟ್ವಾಳ ಪಾಣೆಮಂಗಳೂರುನಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಭೌತಿಸ್ ಟೈಲರ್ ಎಂದೇ ಪ್ರಸಿದ್ಧಿ ಪಡೆದಿದ್ದ ಜನೋಪಕಾರಿ, ಕೊಡುಗೈದಾನಿ ಬ್ಯಾಷ್ಠಿಸ್ಟ್ ಡಿ’ಕುನ್ಹಾ (85) ಇಂದಿಲ್ಲಿ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬಂಟ್ವಾಳ ಪಾಣೆಮಂಗಳೂರು (ಕಲ್ಲಡ್ಕ ಮೊಗರ್ನಾಡ್) ಮಾತೆ ಇಗರ್ಜಿಯ ಪಾಲನಾ ಸಮಿತಿ ಸದಸ್ಯರಾಗಿ,ಮೆಲ್ಕಾರ್ ಯುವಕ ಸಂಘದ ಅಧ್ಯಕ್ಷರಾಗಿ ಮೆಲ್ಕಾರ್ ದಸರಾ (ಟ್ಯಾಬ್ಲೋ) ರೂವಾರಿ ಎಂದೆಣಿಸಿ ಎಲ್ಲಾ ಸಮುದಾಯದವರಲ್ಲೂ ಭಾವೈಕ್ಯತೆ ಹೊಂದಿ ಸಾಮರಸ್ಯದ ಬಾಳಿಗೆ ಪ್ರೇರಕರಾಗಿ ಪ್ರಸಿದ್ಧರೆನಿಸಿದ್ದರು.
ಐವತ್ತು ದಶಕಗಳ ಹಿಂದೆಯೇ ಸುಮಾರು 37 ಧರ್ನಶಿಶು (ಮಕ್ಕಳ ಪೋಷಕ) ಹೊಂದಿ ಹಿತ ಪೋಷಕರೆಣಿಸಿ ಶ್ರೇಷ್ಠವ್ಯಕ್ತಿವೆಂದೇ ಗುರುತಿಸಿ ಜನಾನುರೆಸಿದ್ದರು. ಬಳಿಕ ಬಂಟ್ವಾಳ ಮೊಡಂಕಾಪು ಇಲ್ಲಿನ ಇನ್ಫೆoಟ್ ಜೀಸಸ್ ಚರ್ಚ್ ನಲ್ಲಿ ಪಾಲನಾ ಸಮಿತಿ ಸದಸ್ಯರಾಗಿ,
ತಿಸ್ರಿ ಒಡ್ದ್ ಇದರ ಅಧ್ಯಕ್ಷರಾಗಿ, ಕಥೋಲಿಕ್ ಸಭಾ ಇದರ ಸಕ್ರಿಯ ಸದಸ್ಯರಾಗಿ, ಕೊಡುಗೈದಾನಿಯಾಗಿ ಅನುಪಮ ಸೇವೆ ಸಲ್ಲಿಸಿದ್ದು, ಸದ್ಯ ಮಂಗಳೂರು ಬಿಕರ್ಣಕಟ್ಟೆ ಇಲ್ಲಿನ ಜಯಶ್ರೀಗೇಟ್ ನ ಸ್ವನಿವಾಸದಲ್ಲಿ ನೆಲೆಸಿದ್ದರು.
ಮೃತರು ಪತ್ನಿ ಇಬ್ಬರು ಸುಪುತ್ರಿಯರು, ಮುಂಬಯಿ ಪತ್ರಕರ್ತ ರೋನ್ಸ್ ಬಂಟ್ವಾಳ ಸೇರಿದಂತೆ ಮೂವರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು
ನಾಳೆ ಗುರುವಾರ (ಮೇ 22) ಮಧ್ಯಾಹ್ನ 2:00 ಗಂಟೆಗೆ ಸ್ವನಿವಾಸಕ್ಕೆ ತಂದು ಬಳಿಕ 2:45 ರಿಂದ 3:30ರ ವರೆಗೆ ಬಜ್ಜೋಡಿ ಅಲ್ಲಿನ ಇನ್ಫೆಂಟ್ ಮೇರಿ ಚರ್ಚ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗುವುದು. 3:30 ಗಂಟೆಗೆ ಪೂಜೆ, ನಂತರ ಸೈoಟ್ ಸೆಬಾಸ್ಟಿಯನ್ ಚರ್ಚ್ (ಬೆಂದೂರು) ಇದರ ಸಮಾಧಿ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು