ಇತ್ತೀಚಿನ ಸುದ್ದಿ
ಬಂಟ್ವಾಳ: ತೆರೆದ ಬಾವಿಗೆ ಬಿದ್ದ ದನ; ಅಗ್ನಿ ಶಾಮಕ ದಳದಿಂದ ರಕ್ಷಣೆ
26/11/2022, 08:38

ಬಂಟ್ವಾಳ(reporterkarnataka.com: ಬಂಟ್ವಾಳ ತಾಲ್ಲೂಕು ಕಾವಳ ಮುಡೂರು ಗ್ರಾಮದ ಬರ್ಕಟ ಎಂಬಲ್ಲಿ ನವಾಜ್ ಎಂಬವರ ಮನೆಯ ಅಂಗಳದ ತೆರೆದ ಬಾವಿಗೆ ದನ ಒಂದು ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ನೆರವಿನಿಂದ ಅದನ್ನು ರಕ್ಷಿಸಲಾಗಿದೆ.
ಬಂಟ್ವಾಳ ಅಗ್ನಿ ಶಾಮಕ ಠಾಣೆ ಸಿಬ್ಬಂದಿಗಳು ತುರ್ತಾಗಿ ಸ್ಥಳಕ್ಕಾಗಮಿಸಿ ದನವನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಅಗ್ನಿಶಾಮಕ ದಳದ ಪುರುಷೋತ್ತಮ ಅವರು ಬಾವಿಗಿಳಿದು ದನವನ್ನು ಮೇಲಕೆತ್ತಲು ಸಹಕರಿಸಿದರು.ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ಠಾಣೆಯ ಠಾಣಾಧಿಕಾರಿ ಯು.ರವೀಂದ್ರ, ಚಾಲಕ ನಂದಪ್ಪ , ಎಸ್. ಕ್ರಷ್ಣಪ್ಪ, ಕೆ. ಸುರೆಂದ್ರ ,ರುಕ್ಮಯ್ಯ ಅಮೀನ್ ,ಗ್ರಹರಕ್ಷಕ ಸಿಬ್ಬಂದಿ ಜಯಗಣೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.