ಇತ್ತೀಚಿನ ಸುದ್ದಿ
ಬಂಟ್ವಾಳ: ಎನ್ನೆಸ್ಸೆಸ್, ರೆಡ್ ಕ್ರಾಸ್ ಘಟಕದಿಂದ ರಕ್ತದಾನ ಶಿಬಿರ
20/03/2022, 23:22
ಬಂಟ್ವಾಳ(reporterkarnataka.com): ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ರೆಡ್ ಕ್ರಾಸ್, ಎನ್ನೆಸ್ಸೆಸ್ ಘಟಕ, ಕೆಎಂಸಿ ಆಸ್ಪತ್ರೆ ರಕ್ತ ನಿಧಿ, ಲಯನ್ಸ್ ಕ್ಲಬ್ ಬಂಟ್ವಾಳದ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಡಾ.ತನ್ವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ಕುಮಾರ್ ರೈ ಮತ್ತು ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ.ಗಿರೀಶ್ ಭಟ್ ಅಜೆಕಲ ರಕ್ತದಾನದ ಮಹತ್ವ ದ ಬಗ್ಗೆ ಮಾತನಾಡಿದರು. ಪ್ರಾಂಶುಪಾಲ ಡಾ.ಸತೀಶ್ ಗಟ್ಟಿಅಧ್ಯಕ್ಷತೆ
ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಡಾ.ವಸಂತ ಬಾಳಿಗಾ, ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಸಂದೀಪ್ ಗೌಡ, ಕಾಲೇಜು ಅಭಿವೃದ್ಧಿ ಸಮಿತಿಯ ಭಾಸ್ಕರ್ ಟೈಲರ್ ಭಾಗವಹಿಸಿದ್ದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಹೈದರಾಲಿ, ರೇಂಜರ್ ರೋವರ್ ಘಟಕದ ಅಪರ್ಣ, ಪ್ರೊ. ಬಾಲಸುಬ್ರಹ್ಮಣ್ಯ ಸಹಕರಿಸಿದರು. ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕಿ ಪ್ರೊ. ಶಶಿಕಲಾ ಸ್ವಾಗತಿಸಿದರು. IQAC ಘಟಕದ ನಂದಕಿಶೋರ್ ವಂದಿಸಿದರು. ವಿದ್ಯಾರ್ಥಿನಿ ಅಶ್ವಿತ ಮತ್ತು ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.