11:01 AM Saturday4 - October 2025
ಬ್ರೇಕಿಂಗ್ ನ್ಯೂಸ್
Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ…

ಇತ್ತೀಚಿನ ಸುದ್ದಿ

Bantwal | ಧರ್ಮ ಎಲ್ಲರನ್ನೂ ಒಗ್ಗೂಡಿಸುತ್ತದೆ: ತುಂಬೆ ಫೆಸ್ಟ್- 2025 ಉದ್ಘಾಟಿಸಿ ಒಡಿಯೂರು ಶ್ರೀ

12/04/2025, 10:38

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಸರ್ವ ಧರ್ಮವೂ ಶ್ರೇಷ್ಠ ವಾದುದು. ಅದು ಎಲ್ಲರನ್ನೂ ಒಗ್ಗೂಡಿಸುತ್ತದೆ. ಉತ್ಸವಗಳ ಉದ್ದೇಶ ಜನರಲ್ಲಿ‌ ಜಾಗೃತಿ ಮೂಡಿಸುವ ಕೆಲಸವಾಗಿದೆ. ದೇಶ ಬೆಳೆಯಬೇಕಾದರೆ ಪ್ರಜ್ಞಾವಂತ ಪ್ರಜೆಗಳು ‌ಅಭಿವೃದ್ಧಿಯಾಗಬೇಕು ಎಂದು ಒಡಿಯೂರು ಕ್ಷೇತ್ರದ‌ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆ ಬಳಿ‌ ತುಂಬೆ ಗ್ರೌಂಡ್ಸ್ ನಲ್ಲಿ ಏ.11ರಿಂದ‌ 13 ರವರೆಗೆ ನಡೆಯಲಿರುವ ತುಂಬೆ ಫೆಸ್ಟ್ -2025 ಕಾರ್ಯಕ್ರಮ ಉದ್ಘಾಟಿಸಿ‌ ಶುಭಹಾರೈಸಿ ಮಾತನಾಡಿದರು.


ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಧರ್ಮಗಿರುಗಳಾದ ರೆ.ಫಾ. ವಲೇರಿಯನ್ ಡಿಸೋಜ ಮುಖ್ಯ‌ ಅತಿಥಿಯಾಗಿ ಮಾತನಾಡಿ ಭಾರತ ಮಾತೆಯ ಮಕ್ಕಳೆಲ್ಲಾ ಒಂದೇ ಎಂಬ ಭಾವನೆ ಬೆಳೆದು ಮಾನವೀಯತೆಯನ್ನು ರೂಢಿಸಿಕೊಳ್ಳಬೇಕೆಂದರು.
ಅಲ್ ಹಾಜ್‌ ಕೆ.ಪಿ.ಇರ್ಷಾದ್ ದಾರಿಮಿ ಮಿತ್ತಬೈಲ್ ಅತಿಥಿ ಯಾಗಿ ಉಪಸ್ಥಿತರಿದ್ದರು.
ಅತಿಥಿಗಳನ್ನು ಚೆಂಡೆವಾದನದೊಂದಿಗೆ‌ ಸಭಾ ವೇದಿಕೆಗೆ ಸ್ವಾಗತಿಸಲಾಯಿತು.
ಫೆಸ್ಟ್ ಸಂಯೋಜಕರಾದ ಬಿ.ಎಂ.ಅಶ್ರಫ್, ತುಂಬೆ ‌ಬಿ.ಎ.ಗ್ರೂಪ್ ಎಂ.ಡಿ. ಬಿ.ಅಬ್ದುಲ್ ಸಲಾಂ, ಐಟಿಐ ಕಾಲೇಜಿನ ಪ್ರಾಂಶುಪಾಲ ನವೀನ ಕುಮಾರ್ ಕೆ.ಎಸ್‌., ಪಿಯು ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಭಟ್, ಶಿಕ್ಷಕರಾದ ಜಗದೀಶ ರೈ, ಸಾಯಿ ರಾಮ್ , ದಿನೇಶ್ ಶೆಟ್ಟಿ ಮೊದಲಾದವರಿದ್ದರು.
ಮೇಳದಲ್ಲಿ ಯೇನೆಪೋಯ ಮಹಿಳಾ ಆರೋಗ್ಯ ಸಂಚಾರಿ ಆಸ್ಪತ್ರೆಯ ವತಿಯಿಂದ ಆರೋಗ್ಯ ತಪಾಸಣೆ, ತೋಟಗಾರಿಕಾ ಇಲಾಖೆಯ ಯಂತ್ರೋಪಕರಣ ಪ್ರದರ್ಶನ, ಸಿರಿಧಾನ್ಯ ಮಾರಾಟ, ಸ್ತ್ರೀ ಶಕ್ತಿ ಸಂಘಟನೆಯ ವಿವಿಧ ಮಳಿಗೆಗಳು ಗಮನ ಸೆಳೆದವು. ಯೇನೆಪೋಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು