ಇತ್ತೀಚಿನ ಸುದ್ದಿ
ಬಂಟ್ವಾಳ: ನೇತ್ರಾವತಿಯಲ್ಲಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ
06/07/2022, 20:28
ಬಂಟ್ವಾಳ(reporterkarnataka.com):
ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ಅಶ್ವಿತ್(19) ನೀರುಪಾಲಾಗಿದ್ದು, ಆತನ ಮೃತದೇಹ ಬುಧವಾರ ಉಳ್ಳಾಲದ ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಸಜಿಪಪಡುವಿನ ತಲೆಮೊಗರು ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವನ್ನ ತೊಟ್ಟಿಲು ತೂಗುವ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಶ್ವಿಥ್ ಸಂಬಂಧಿಕ ಕಾಲೇಜು ಗೆಳೆಯರೊಂದಿಗೆ ಸಮೀಪದ ನೇತ್ರಾವತಿ ನದಿಗೆ ನೀರಿನಲ್ಲಿ ಮೋಜು ಮಸ್ತಿಗಾಗಿ ತೆರಳಿದ್ದಾರೆ.
ಈ ವೇಳೆ ಅಶ್ಚಿತ್ ಮತ್ತು ಹರ್ಷ ನೀರುಪಾಲಾಗಿದ್ದಾರೆ. ಜತೆಯಲ್ಲಿದ್ದ ಯುವಕರು ಹರ್ಷನನ್ನು ರಕ್ಷಿಸಿ ಮೇಲಕ್ಕೆತ್ತಿದ್ದರು. ಅಶ್ವಿತ್ ನಾಪತ್ತೆಯಾಗಿದ್ದರು.