4:21 AM Monday6 - April 2026
ಬ್ರೇಕಿಂಗ್ ನ್ಯೂಸ್
Kodagu | ನಟಿ ರಶ್ಮಿಕಾ ಮಂದಣ್ಣಗೆ ತಂದೆಯಿಂದ ವಿರಾಜಪೇಟೆಯ “ಸೆರಿನಿಟಿ ಕಾಟೇಜ್” ಗಿಫ್ಟ್ ಮಧ್ಯಪ್ರಾಚ್ಯ ಯುದ್ಧ: ಕೊಡಗಿನಲ್ಲಿ ಸಿಲುಕಿದ ಇರಾನಿ ದಂಪತಿ; ಪಾಸ್‌ಪೋರ್ಟ್ ಆತಂಕ ಬಾಗಲಕೋಟೆ ಉಪ ಚುನಾವಣೆ | ಬಿಜೆಪಿ ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು… ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆಡಿಸಿದ ಉಪ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ Bangalore | ಅಡುಗೆ ಅನಿಲ ದಾಸ್ತಾನು ಕೊರತೆ ಇಲ್ಲ: ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ… ಮಂಜೇಶ್ವರ ದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ | ಪ್ರಧಾನಿ ಮೋದಿ ಅವರಿಂದ ಆಹಾರ… ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ… ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ

ಇತ್ತೀಚಿನ ಸುದ್ದಿ

ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ಆದಿರಾಜ್ ಜೈನ್ ಆಯ್ಕೆ

10/05/2024, 21:25

ಬಂಟ್ವಾಳ(reporterkarnataka.com):ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ಕೃಷಿಕ ಆದಿರಾಜ ಜೈನ್ ಕೆ. ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ತಾರಾನಾಥ ಕೊಟ್ಟಾರಿ ಫರಂಗಿಪೇಟೆ, ಕೋಶಾಧಿಕಾರಿಯಾಗಿ ಇಂಜಿನಿಯರ್ ನಾಗೇಶ್ ಕುಲಾಲ್ ಆಯ್ಕೆಯಾಗಿದ್ದಾರೆ ಎಂದು ಲೀಜನ್ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಡಾ. ಆನಂದ ಬಂಜನ್, ತರಬೇತಿ ವಿಭಾಗದ ಉಪಾಧ್ಯಕ್ಷರಾಗಿ ನ್ಯಾಯವಾದಿ ಶೈಲಜಾ ರಾಜೇಶ್, ಆಡಳಿತ ವಿಭಾಗದ ಉಪಾಧ್ಯಕ್ಷರಾಗಿ ನ್ಯಾಯವಾದಿ ರವೀಂದ್ ಕುಕ್ಕಾಜೆ, ಸಾರ್ವಜನಿಕ ಸಂಪರ್ಕ ಉಪಾಧ್ಯಕ್ಷರಾಗಿ ಸತ್ಯನಾರಾಯಣ ರಾವ್ ಕೈಕುಂಜೆ , ಕಾರ್ಯದರ್ಶಿಯಾಗಿ ತಾರನಾಥ ಕೊಟ್ಟಾರಿ, ಜತೆಕಾರ್ಯದರ್ಶಿಯಾಗಿ ಪಿ.ಮಹಮ್ಮದ್ , ನಿರ್ದೇಶಕರಾಗಿ ಜಯಾನಂದ ಪೆರಾಜೆ , ರಾಮಚಂದ್ರ ರಾವ್ ಆಯ್ಕೆಯಾಗಿರುತ್ತಾರೆ. ಹದಿನೈದು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ.
ಮೇ 12 ರಂದು ಬಿ.ಸಿ.ರೋಡಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತೀಯ ಜೈನ್ ಮಿಲನ್‌ನ ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್ , ಗೌರವ ಅತಿಥಿಯಾಗಿ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ. ಕೆ ಅರವಿಂದ ರಾವ್ , ಪದಗ್ರಹಣ ಅಧಿಕಾರಿಯಾಗಿ ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು