ಇತ್ತೀಚಿನ ಸುದ್ದಿ
Mangaluru | ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
21/09/2025, 22:38

ಮಂಗಳೂರು(reporterkarnataka.com):ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಕ್ರ: 135/2016 ಕಲಂ 323 324,354& 149 ಐಪಿಸಿ ಪ್ರಕರಣದಲ್ಲಿ 6ನೇ ಜೆಎಂಎಫ್ ಸಿ ನ್ಯಾಯಾಲಯ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಸಿ ಸಿ ನಂಬರ್ 1059/2018 ರಂತೆ ವಿಚಾರಣೆಯಲ್ಲಿರುವ ಪ್ರಕರಣದಲ್ಲಿ ನ್ಯಾಯಾಲಯವು ಕಳೆದ ಒಂದು ವರ್ಷದಿಂದ 9 ಬಾರಿ ವಾರೆಂಟ್ ಹೊರಡಿದ್ದರು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ
ಕುಂಬಳೆ ಸಮೀಪದ ಪೆರವಾಡದ ಹನೀಫ್ ಯಾನೆ ಅಬ್ದುಲ್ ಹನೀಫ್ ಎಂಬಾತನ ವಿರುದ್ಧ ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಬಗ್ಗೆ ಕಲಂ 269 ಬಿಎನ್ಎಸ್ 2023 ರಂತೆ ಈತನ ಪತ್ತೆಗಾಗಿ ಪ್ರಯತ್ನವನ್ನು ಮುಂದುವರಿಸಿದ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವಾರೆಂಟ್ ಸಿಬ್ಬಂದಿಗಳಾದ ಎಎಸ್ಐ ಮಚೇಂದ್ರನಾಥ್ ಜೋಗಿ HC 865 ನೇ ನಾರಪ್ಪ ಕೆಬಿ ರವರು ಸದ್ರಿಯಾತನನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಈತನಿಗೆ 4 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.