ಇತ್ತೀಚಿನ ಸುದ್ದಿ
Bantwal | ಕಲ್ಲಡ್ಕ ಶಾರದೋತ್ಸವ: ವಿದುಷಿ ವಿದ್ಯಾ ಮನೋಜ್ ‘ಶಾಂತಶ್ರೀ’ ಪ್ರಶಸ್ತಿ; ವಿಜಯದಶಮಿ ದಿನ ಶೋಭಾಯಾತ್ರೆ
06/09/2025, 19:45

ಬಂಟ್ವಾಳ(reporterkarnataka.com): ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ವತಿಯಿಂದ ಕಲ್ಲಡ್ಕದಲ್ಲಿ ನಡೆಯುವ ೪೮ನೇ ವರ್ಷದ ಶಾರದೋತ್ಸವವು ಸೆ.೨೮ ರಿಂದ ಅ.೨ ರವರೆಗೆ ಐದು ದಿನಗಳ ಕಾಲ ನಡೆಯಲಿದ್ದು, ಈ ವರ್ಷದ ಕಲ್ಲಡ್ಕ ಶಾರದೋತ್ಸವದ ‘ಶಾಂತಶ್ರೀ’ ಪ್ರಶಸ್ತಿಗೆ ವಿದುಷಿ ವಿದ್ಯಾ ಮನೋಜ್ ಅವರು ಆಯ್ಕೆಯಾಗಿದ್ದರೆ.
೪೪ ವರ್ಷ ಶಬರಿಮಲೆ ಯಾತ್ರೆ ಕೈಗೊಂಡ ಶತಾಯುಷಿಗಳಾದ ಕಮಲ ಗುರುಸ್ವಾಮಿ ಕುಂಟಿಪಾಪು ಮತ್ತು ಸ್ವಉದ್ಯಮದಲ್ಲಿ ಸಾಧನೆಗೈದ ಸಾಧಕಿ ನಾಗರತ್ನ ಪೂರ್ಲಿಪಾಡಿ ಅವರು ‘ಗ್ರಾಮಗೌರವ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸೆ.೨೮ ರಂದು ಕ್ರೀಡಾಕೂಟ ‘ಮಾರ್ನೆಮಿದ ಗೊಬ್ಬು’ ಶಿಶು, ಬಾಲ, ಪ್ರೌಢ, ತರುಣ, ಸಾರ್ವಜನಿಕ ಎಂಬ ಐದು ವಿಬಾಗಗಳಲ್ಲಿ ಜರಗಲಿದ್ದು, ಸೆ.೨೯ ರಂದು ವೇ.ಮೂ. ಪಳನೀರು ಶ್ರೀಪತಿ ಭಟ್ ಅವರ ಪೌರೋಹಿತ್ಯದಲ್ಲಿ ಶಾರದಾ ಮಾತೆಯ ಪ್ರತಿಷ್ಠಾಪನೆ ನೆರವೇರಲಿದೆ. ದುರ್ಗಾಹೋಮ, ಶಾರದೆಗೆ ರಂಗಪೂಜೆ, ಅಕ್ಷರಭ್ಯಾಸ, ಆಯುಧಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಗಣ್ಯರ ಭಾಗವಹಿಸುವಿಕೆಯಲ್ಲಿ ಧಾರ್ಮಿಕ ಸಭೆ, ಪ್ರಶಸ್ತಿ ಪ್ರಧಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ನೌಕಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಮಾಡಲಾಗುವುದು.
ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟಕ, ನೃತ್ಯರಂಜನಿ, ಗಾನ ನಾಟ್ಯ ಸಂಭ್ರಮ ನಡೆಯಲಿದೆ. ವಿಜಯದಶಮಿಯಂದು ಶೋಭಾಯಾತ್ರೆ ಯೊಂದಿಗೆ ಉತ್ಸವವು ಸಮಾಪನಗೊಳ್ಳಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.