7:29 PM Sunday25 - May 2025
ಬ್ರೇಕಿಂಗ್ ನ್ಯೂಸ್
Bangalore | ವಿಧಾನ ಸೌಧ ಇನ್ನು ಮುಂದೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ: ಸಚಿವ… ಮಂಗಳೂರು:ಧರೆಗುರುಳಿದ ನಾಲ್ಕು ಮರಗಳು, ಜಖಂಗೊಂಡ ವಾಹನಗಳು ; ಸ್ಮಾರ್ಟ್ ಸಿಟಿಯೊಳಗಿನ ಅವೈಜ್ಞಾನಿಕ ಕಾಮಗಾರಿಗೆ… Kolara | ಶ್ರೀನಿವಾಸಪುರ ಮಾವಿನ ಸೀಸನ್ ಪ್ರಾರಂಭ: ಆರ್ಥಿಕ ಚಟುವಟಿಕೆಗೆ ಚುರುಕು, ಸ್ವಚ್ಛತೆಗೆ… New Delhi | ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಕೇಂದ್ರ… ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಖ್ಯಾತ ಸಂಗೀತ… Bangalore | ಗಾರ್ಡನ್ ಸಿಟಿ ವಿಶ್ವವಿದ್ಯಾಲಯ: ಸಾಧಕರಿಗೆ 14ನೇ ಜಿಸಿಯು ಪುರಸ್ಕಾರ Mangaluru | ಮದುವೆ ಸಂಬಂಧದ ಬಗ್ಗೆ ಮನಸ್ತಾಪ ; ಚಿಕ್ಕಪ್ಪನನ್ನೆ ಕೊಂದ ಮುಸ್ತಾಫ Bangalore | ಯಜಮಾನಿಯರಿಂದ “ಗೃಹಲಕ್ಷ್ಮೀ ಸಂಘ” ರಚನೆಗೆ ಕಾರ್ಯಯೋಜನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಗಳೂರಿನಲ್ಲಾದ ಮಳೆ ಹಾನಿಗೆ 25,000 ರೂ. ನಿಂದ 1 ಲಕ್ಷ ರೂ. ವರೆಗೆ… Karnataka Police | ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ. ಸಲೀಂ ನೇಮಕ

ಇತ್ತೀಚಿನ ಸುದ್ದಿ

ಬಂಟರ ಸಂಘ ಬಂಟವಾಳ ತಾಲೂಕು ವಿಂಶತಿ ಸಂಭ್ರಮ: ಉದ್ಘಾಟನಾ ಸಮಾರಂಭ

25/05/2025, 13:27

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಬಂಟ್ವಾಳ ತಾಲೂಕು ಬಂಟರ ಸಂಘದ ವಿಂತತಿ ಸಂಭ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿ ಬಂಟ ಸಮಾಜದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ಬಂಟರ ಸಂಘದ ಬಂಟವಾಳ ತಾಲೂಕು ಸಂಘದ ಸ್ಥಾಪಕ ಅಧ್ಯಕ್ಷ ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.


ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಪದಾಧಿಕಾರಿಗಳಾದ ಡಾ.ಪ್ರಶಾಂತ ಮಾರ್ಲ, ಜಗನ್ನಾಥ ಚೌಟ ಬದಿಗುಡ್ಡೆ , ಲೋಕೇಶ್ ಶೆಟ್ಟಿ ಕುಳ, ರಂಜನ್ ಕುಮಾರ್ ಶೆಟ್ಟಿ ಅರಳ , ಪ್ರತಿಭಾ ರೈ ಪಾಣೆಮಂಗಳೂರು, ರಮಾ ಎಸ್.ಭಂಡಾರಿ, ನಿಶಾನ್ ಆಳ್ವ ಬಿ.ಸಿ. ರೋಡ್ ಮತ್ತಿತರರು ಉಪಸ್ಥಿತಿದ್ದರು.
ಮುಖ್ಯ ಅತಿಥಿಗಳಾಗಿ ರಾಜೇಶ್ ಚೌಟ ಸುಜೀರುಗುತ್ತು, ವಿಶ್ವನಾಥ ಶೆಟ್ಟಿ ಕರ್ನಿರೆ, ಕೆ.ಕೆ. ಶೆಟ್ಟಿ ಕುತ್ತಿಕಾರ್,ಕೆ.ಪಿ. ಶೆಟ್ಟಿ ಮೊಡಂಕಾಪುಗುತ್ತು,ರಘು ಎಲ್.ಶೆಟ್ಟಿ ಮುಂಬಯಿ, ಸುಧಾಕರ ಶೆಟ್ಟಿ ಮುಗರೋಡಿ, ರೋಹಿತ್ ಶೆಟ್ಟಿ ನಗ್ರಿಗುತ್ತು, ಮಲ್ಲಿಕಾ ಪಕ್ಕಳ ಮಲಾರು, ಅಜಿತ್ ಚೌಟ ದೇವಸ್ಯ, ಅರವಿಂದ ಶೆಟ್ಟಿ ನಡುಮೊಗರುಗುತ್ತು, ಡಾ.ಶಿವಪ್ರಸಾದ್ ಶೆಟ್ಟಿ ಬಿ.ಸಿ. ರೋಡು, ಚಂದ್ರಪ್ರಕಾಶ ಶೆಟ್ಟಿ ತುಂಬೆಗುತ್ತು, ಸತೀಶ್ ಆಳ್ವ ಮುಡಾರೆ,ಡಾ.ಸತ್ಯ ಶಂಕರ್ ಶೆಟ್ಟಿ ಬಿ ಸಿ. ರೋಡು, ಧೀರಜ್ ನಾಯ್ಕ್ ನಾರ್ಯನಡಿಗುತ್ತು ಮೊದಲಾದವರು ಭಾಗವಹಿಸಿದ್ದರು.

*20 ಮಂದಿಸಾಧಕರಿಗೆ ವಿಂಶತಿ ಸನ್ಮಾನ:*
ಬಿ.ರಮಾನಾಥ ರೈ (ಮಾಜಿ ಸಚಿವರು), ಜಸ್ಟೀಸ್ ರಾಜೇಶ್ ರೈ ಕಲ್ಲಂಗಳ, ಡಾ.ಸತೀಶ್ ಭಂಡಾರಿ, ರವಿಶಂಕರ ಶೆಟ್ಟಿ ಬಡಾಜೆಗುತ್ತು,ಕರ್ನಲ್ ಜಗಜೀವನ ಭಂಡಾರಿ ಅಗರಿ, ವಿಠಲ ರೈ ಬಾಲಾಜಿ ಬೈಲು, ಶೀನಶೆಟ್ಟಿ ವೀರಕಂಭ,ರವಿ ಶೆಟ್ಟಿ ದೋಣಿಂಜೆಗುತ್ತು,ಸರಸ್ವತಿ ಜಿ.ರೈ ಬೋಳಂತೂರು ಗುತ್ತು,ಕಾಂತಪ್ಪ ಶೆಟ್ಟಿ ‌ಅಗರಿ, ಮಹಾಬಲ ಶೆಟ್ಟಿ ಪಟ್ಲಗುತ್ತು, ಜಯರಾಮ ರೈ ಮಲಾರು, ಸುರೇಶ ರೈ ಮಕರಜ್ಯೋತಿ, ರವೀಂದ್ರ ಕಂಬಳಿ ಸುಜೀರುಬೀಡು, ಸಚ್ಚಿದಾನಂದ ಶೆಟ್ಟಿ ಬೊಂಡಾಲ,ಸಿ.ಎ. ಯತೀಶ್ ಭಂಡಾರಿ ಬಿಸಿರೋಡು, ಪ್ರದೀಪ್ ಆಳ್ವ ಅಜೆಕಲಗುತ್ತು,ಶ್ರೀನಾಥ್ ಶೆಟ್ಟಿ ಮೊಡಂಕಾಪುಗುತ್ತು , ಆನಂದ ಶೆಟ್ಟಿ ಕಾಂಪ್ರಬೈಲು, ಚೇತನ್ ರೈ ಮಾಣಿ, ಪುರಂದರ ಶೆಟ್ಟಿ ಗೋಳ್ತಮಜಲು ಸವರಿಗೆ ವಿಂಶತಿ ಸನ್ಮಾನ ಮಾಡಲಾಯಿತು.
ವಿವಿಧ ವಲಯಾಧ್ಯಕ್ಷರು ವೇದಿಕೆಯಲ್ಲಿದ್ದರು. ಚಂದ್ರಹಾಸ ಶೆಟ್ಟಿ ರಂಗೋಲಿ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿದರು.ಡಾ.ಪ್ರಖ್ಯಾತ ಶೆಟ್ಟಿ ಪ್ರಾರ್ಥಿಸಿದರು. ಆಶಾ ರೈ ಮತ್ತಿತರರು ಸನ್ಮಾನ ಪತ್ರ ವಾಚಿಸಿದರು.
ಭಾನುವಾರ ಬೆಳಿಗ್ಗೆ ಶೈಕ್ಷಣಿಕ, ವೃತ್ತಿಮಾರ್ಗದರ್ಶನ, ವಿಂಶತಿ ಗೌರವ, ನೃತ್ಯ ಸ್ಪರ್ಧೆ, ಯುವೋಚ್ಚಯ, ಸಂಜೆ ಸಮಾರೋಪ ಸಮಾರಂಭ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು