ಇತ್ತೀಚಿನ ಸುದ್ದಿ
ಬಂಟ್ವಾಳ: ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪಾದಯಾತ್ರೆ, ಸೈಕಲ್ ಜಾಥಾ
14/07/2021, 09:30
ಬಂಟ್ವಾಳ(reporterkarnataka news): ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಹನುಮಾನ್ ಮಂದಿರ ಬಡ್ಡಕಟ್ಟೆದಿಂದ ಕೈಕಂಬ ಜಂಕ್ಷನ್ ಬಿ. ಸಿ ರೋಡ್ ತನಕ ಪೆಟ್ರೋಲ್ ಡೀಸೆಲ್ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯನ್ನು ಖಂಡಿಸಿ ಪಾದಯಾತ್ರೆ ಹಾಗೂ ಸೈಕಲ್ ಜಾಥಾ ನಡೆಯಿತು.
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ನೇತೃತ್ವ ವಹಿಸಿದ್ದರು. ಪಕ್ಷದ ನಾಯಕರು ಭಾಗವಹಿಸಿದ್ದರು.