ಇತ್ತೀಚಿನ ಸುದ್ದಿ
ಬಣಕಲ್: ಕಳೆದುಕೊಂಡ ಪರ್ಸ್ ಮರಳಿಸಿ ಮಾನವೀಯತೆ ಮೆರೆದ ದೇವರಾಜ್
25/07/2024, 14:55

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಮೀಪದ ಬಣಕಲ್ ನಲ್ಲಿ ರಸ್ತೆಯಲ್ಲಿ ಸಿಕ್ಕಿದ ಪರ್ಸನ್ನು ಸಬ್ಲಿ ದೇವರಾಜ್ ಎಂಬವರು ಅದರ ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಭಾನುವಾರದಂದು ಓರ್ವ ಮಹಿಳೆ ಪರ್ಸನ್ನು ರಸ್ತೆಯಲ್ಲಿ ಬೀಳಿಸಿ ಹೋಗಿದ್ದರು. ಆ ಪರ್ಸ್ ಸಬ್ಲಿ ದೇವರಾಜ್ ಅವರಿಗೆ ಸಿಕ್ಕಿತ್ತು.ಅದರಲ್ಲಿ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಪಿಲೋಮಿನಾ ಪಾಯ್ಸ್, ಚನ್ನಡ್ಲು ಎಂದು ಇತ್ತು. ಅವರನ್ನು ಕೊಟ್ಟಿಗೆಹಾರಕ್ಕೆ ಕರೆಸಿ ಅವರ 1500 ರೂ. ನಗದು, ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳು ಇದ್ದುದರಿಂದ ಅವರಿಗೆ ದೇವರಾಜ್ ಅವರು ಹಣದ ಪರ್ಸ್ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.