ಇತ್ತೀಚಿನ ಸುದ್ದಿ
Bangaluru | ಮಿಸ್ ಇಂಡಿಯಾ ಆಸ್ಟ್ರಲ್ 2025 ಆಗಿ ಮಂಗಳೂರಿನ ಆಶ್ನಾ ಜುವೆಲ್ ಆಯ್ಕೆ
15/09/2025, 09:27

ಬೆಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರ ವಲಯಅದ ಫೆರಾರ್ ನಿವಾಸಿ ಆಶ್ನಾ ಜುವೆಲ್ ಡಿ ಸೋಜಾ ಅವರು ಶನಿವಾರ ಬೆಂಗಳೂರಿನ ದಿ ಕಿಂಗ್ಸ್ ಮಿಡೋಸ್ ನಲ್ಲಿ ನಡೆದ ವೈಭವಮಯ ಅಂತಿಮ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಆಸ್ಟ್ರಲ್ 2025 ಆಗಿ ಆಯ್ಕೆಯಾದರು.
ದೇಶದ ವಿವಿಧ ಭಾಗಗಳಿಂದ ಬಂದ 45 ಸ್ಪರ್ಧಿಗಳ ನಡುವೆ ನಡೆದ ಈ ಸ್ಪರ್ಧೆ ಮಿಸ್ ಆ್ಯಂಡ್ ಮಿಸ್ ಇಂಡಿಯಾ ಪೆಜೆಂಟ್ ನ 9ನೇ ಆವೃತ್ತಿಯಾಗಿತ್ತು. ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಕಿರೀಟದ ಜತೆಗೆ ಆಶ್ನಾ ಹಲವು ಉಪ ಶೀರ್ಷಿಕೆಗಳನ್ನು ತಮ್ಮದಾಗಿಸಿಕೊಂಡರು. ಅವುಗಳಾದ ಮಿಸ್ ಬೆಸ್ಟ್ ಟ್ಯಾಲೆಂಟ್, ಮಿಸ್ ಬೆಸ್ಟ್ ಸ್ಟೇಜ್ ಪ್ರೆಸೆನ್ಸ್ ಹಾಗೂ ಮಿಸ್ ಬೆಸ್ಟ್ ವಾಕ್ ಪ್ರಶಸ್ತಿಗಳು ಅವರನ್ನು ಈ ಸ್ಪರ್ಧೆಯ ಪ್ರಮುಖ ವಿಜೇತೆಯನ್ನಾಗಿ ಮಾಡಿದವು.
ಈ ಸಾಧನೆಯೊಂದಿಗೆ ಆಶ್ನಾ ಅವರು ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ 2626 ಎಂಬ ಗೌರವಾನ್ವಿತ ಬಿರುದನ್ನೂ ಗಳಿಸಿದ್ದಾರೆ. ಇದರ ಮೂಲಕ ಅವರು ಮುಂದಿನ ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ.