ಇತ್ತೀಚಿನ ಸುದ್ದಿ
Bangalore | ಗಾರ್ಡನ್ ಸಿಟಿ ವಿಶ್ವವಿದ್ಯಾಲಯ: ಸಾಧಕರಿಗೆ 14ನೇ ಜಿಸಿಯು ಪುರಸ್ಕಾರ
23/05/2025, 20:49

ಬೆಂಗಳೂರು(reporterkarnataka.com): ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಡಾ. ಎಪಿಜೆ ಅಬ್ದುಲ್ ಕಲಾಂ ಸ್ಕೂಲ್ ಆಫ್ ಎಂಜಿನಿಯರಿಂಗ್ ವತಿಯಿಂದ ಮೇ 23ರಂದು 14ನೇ ಜಿಸಿಯು ಪುರಸ್ಕಾರ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಗೌರವಾನ್ವಿತ ಕುಲಾಧಿಪತಿಗಳಾದ ಡಾ.ಜೋಸೆಫ್ ವಿ.ಜಿ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಸಾಧಕರನ್ನು ಗುರುತಿಸಿ ಅವರಿಗೆ 14ನೇ ಜಿಸಿಯು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಲಾಧಿಪತಿಗಳಾದ ಡಾ.ಜೋಸೆಫ್ ಅವರು ಮಾತನಾಡಿ, ಉದ್ಯಮಿಗಳು ಹೆಚ್ಚಾಗಿ ಶೈಕ್ಷಣಿಕ ವೇದಿಕೆಯಲ್ಲಿ ಕೌಶಲ್ಯಗಳ ಕುರಿತು ತಿಳಿಸಿಕೊಡಲು ಈ ರೀತಿಯಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಪ್ರೇರೇಪಿಸಿದರು. ಜೊತೆಗೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಪ್ರೇರಣೆಯಾಗಿ, ಭವಿಷ್ಯದ ಸಾಧಕರನ್ನಾಗಿ ಮಾಡುವತ್ತ ವಿಶ್ವವಿದ್ಯಾಲಯವು ಮುಂದಾಗಿದೆ ಎಂಬುದನ್ನು ತಿಳಿಸಿಕೊಡುವುದರ ಜೊತೆಗೆ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿಯೂ ಆಗಬೇಕು ಎಂದರು.
ಸಂಪರ್ಕಿಸಿ: ಸಾರ್ವಜನಿಕ ಸಂಪರ್ಕ ಕಚೇರಿ
ಗಾರ್ಡನ್ ಸಿಟಿ ವಿಶ್ವವಿದ್ಯಾಲಯ
ಇಮೇಲ್: pro@gardencity.university
ವೆಬ್‌ಸೈಟ್: www.gardencity.university