2:18 PM Sunday10 - August 2025
ಬ್ರೇಕಿಂಗ್ ನ್ಯೂಸ್
ಧರ್ಮಸ್ಥಳ: ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣ; 6 ಮಂದಿಯ ಬಂಧನ Bangalore | ಪ್ರಧಾನಿ ಮೋದಿಯವರ ಬೆಂಗಳೂರು ಕಾರ್ಯಕ್ರಮ; ಪ್ರತಿಪಕ್ಷದ ನಾಯಕ ಆರ್. ಅಶೋಕ್… ಅತ್ತೂರುಕೊಲ್ಲಿ ಅದಿವಾಸಿಗಳ ಪರ ಹೋರಾಟ: ನಟ ಚೇತನ್ ಅಹಿಂಸಾ ಸೇರಿ ಐವರ ವಿರುದ್ಧ… Bangalore | ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ವಂದೇ ಭಾರತ್ ಎಕ್ಸ್ ಪ್ರೆಸ್… ರಾಹುಲ್‌ ಗಾಂಧಿಯದ್ದು ಠುಸ್‌ ಪಟಾಕಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿಯ… ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಕೊಕ್ಕಡದಲ್ಲಿ ಬಂಧನ ಆಲಮಟ್ಟಿ ಡ್ಯಾಮ್ ಎತ್ತರ 524 ಮೀಟರ್‌ಗೆ ಹೆಚ್ಚಿಸುವುದು ಕರ್ನಾಟಕದ ಹಕ್ಕು: ಕೇಂದ್ರ ಜಲಶಕ್ತಿ… Chikkamagaluru | ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ: ಹೆದ್ದಾರಿ, ಕಾಫಿ ತೋಟದಲ್ಲಿಯೂ ದಾಂಧಲೆ ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ…

ಇತ್ತೀಚಿನ ಸುದ್ದಿ

Bangalore | ರಕ್ತದ ಕ್ಯಾನ್ಸರ್‌ ರೋಗಿಗಳಿಗೆ ಆಶಾಕಿರಣವಾದ “ಕಾರ್‌ ಟಿ-ಸೆಲ್‌ ಥೆರಪಿ”: ಕಿರಣ್‌ ಮಂಜುಂದಾರ್‌ ಶಾ

10/08/2025, 13:39

* ದೇಶದಲ್ಲೇ ಮೊದಲ ಬಾರಿಗೆ ದೇಶಿಯ ಸಂಸ್ಥೆಯಾದ ಇಮ್ಯುನೀಲ್‌ ಥೆರಪ್ಯೂಟಿಕ್ಸ್‌ ಸಂಸ್ಥೆ ವತಿಯಿಂದ ಕಾರ್‌ ಟಿ-ಸೆಲ್‌ ಥೆರಪಿ ಅಭಿವೃದ್ಧಿ

ಬೆಂಗಳೂರು(reporterkarnataka.com): ಲಿಂಫೋಮಾ (ರಕ್ತದ ಕ್ಯಾನ್ಸರ್‌) ನಿಂದ ಬಳುತ್ತಿರುವ ರೋಗಿಗಳಿಗೆ ಆಶಾಕಿರಣವಾಗಿ “ಕಾರ್‌ ಟಿ-ಸೆಲ್ ಥೆರಪಿ” ಯನ್ನು ಇಮ್ಯುನೀಲ್ ಥೆರಪ್ಯೂಟಿಕ್ಸ್‌ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಇದು ದೇಶಿಯವಾಗಿ ಅಭಿವೃದ್ಧಿ ಪಡಿಸಿದ ಭಾರತದ ಮೊದಲ ಚಿಕಿತ್ಸೆಯಾಗಿದೆ.
ಅಷ್ಟೆ ಅಲ್ಲದೆ, ಈ ಥೆರಪಿ ಬಳಿಕ ಏಳು ರೋಗಿಗಳು ದೀರ್ಘಕಾಲಿಕವಾಗಿ ಬದುಕುಳಿಯುವ ಮೂಲಕ ಈ ಥೆರಪಿ ರಕ್ತದ ಕ್ಯಾನ್ಸರ್‌ ರೋಗಿಗಳಿಗೆ ಅತ್ಯಂತ ಯಶಸ್ವಿ ಥೆರಪಿ ಎಂಬುದನ್ನು ಸಾಬೀತುಪಡಿಸಲಾಗಿದೆ.
ಇಮ್ಯುನೀಲ್ ಥೆರಪ್ಯೂಟಿಕ್ಸ್‌ ಮಂಡಳಿಯ ನಿರ್ದೇಶಕಿ ಹಾಗೂ ಸಹ-ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಸಾಕಷ್ಟು ಜನರು ರಕ್ತದ ಕ್ಯಾನ್ಸರ್‌ ಆದ ಲಿಂಫೋಮಾದಿಂದ ಬಳಲುತ್ತಿದ್ದಾರೆ. ಅದರಲ್ಲೂ ಮರುಕಳುಹಿಸುವ ಕ್ಯಾನ್ಸರ್‌ಗೆ ಶಾಶ್ವತ ಪರಿಹಾರವಾಗಿ ಇದೀಗ ಕಾರ್‌ ಟಿ-ಸೆಲ್‌ ಥೆರಪಿಯನ್ನು ಅಭಿವೃದ್ಧಿ ಪಡಿಸಲಾಗಿದೆ. 2022ರಲ್ಲಿ ನಾವು ಅಭಿವೃದ್ಧಿ ಪಡಿಸಿದ ಕಾರ್‌ ಟಿ-ಸೆಲ್‌ ಥೆರಪಿಗೆ ಒಳಗಾದ ಏಳು ರಕ್ತದ ಕ್ಯಾನ್ಸರ್‌ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದು, ಅವರ ಬದುಕುಳಿಯುವಿಕೆಯ ಪ್ರಮಾಣ ಹೆಚ್ಚಾಗಿದೆ ಎಂದರು.
ಕ್ಲಿನಿಕಲ್ ಪ್ರಯೋಗದ ಅಡಿಯಲ್ಲಿ, ವಾರ್ನಿಮ್‌ ಕ್ಯಾಬ್ಟಜೀನ್ ಆಟೋಲ್ಯೂಸೆಲ್ (IMN-003A) ಎಂದು ಕರೆಯಲ್ಪಡುವ CAR ಟಿ-ಸೆಲ್ ಥೆರಪಿಯು ಮರುಕಳುಹಿಸುವ ಅಥವಾ CD19-ಪಾಸಿಟಿವ್ ಬಿ-ಸೆಲ್ ನಾನ್-ಹಾಡ್ಗ್ಕಿನ್ ಲಿಂಫೋಮಾ (B-NHL) ಹೊಂದಿರುವ ವಯಸ್ಕ ರೋಗಿಗಳಿಗೆ ಈ ಥೆರಪಿ ಹೆಚ್ಚು ಪರಿಣಾಮಕಾರಿ, ರಕ್ತದ ಕ್ಯಾನ್ಸರ್‌ ಹೆಚ್ಚು ಆಕ್ರಮಣಕಾರಿ ರೂಪದಲ್ಲಿದ್ದರೂ ಈ ಥೆರಪಿ ಮೂಲಕ ಗುಣಪಡಿಸುವ ಪ್ರಮಾಣ ಜಾಸ್ತಿ. ಇದುವರೆಗೂ ರಕ್ತದ ಕ್ಯಾನ್ಸರ್‌ಗೆ ಇರುವ ಚಿಕಿತ್ಸೆಯ ಫಲಿತಾಂಶದ ಪ್ರಮಾಣ ಶೆ.೭೦ಕ್ಕಿಂತ ಕಡಿಮೆ ಇದೆ, ಆದರೆ, ಕಾರ್‌ ಟಿ-ಸೆಲ್‌ ಥೆರಪಿಯ ಫಲಿತಾಂಶದ ಪ್ರಮಾಣ ಶೇ.83ರಷ್ಟಿದ್ದು, ಇಷ್ಟು ಪ್ರಮಾಣದ ಫಲಿತಾಂಶ ಹೊಂದಿರುವ ದೇಶದ ಮೊದಲ ಚಿಕಿತ್ಸೆ ಇದಾಗಿದೆ. ಈಗಾಗಲೇ ಏಳು ರೋಗಿಗಳು ಕಾರ್‌ ಟಿ-ಸೆಲ್‌ ಥೆರಪಿ ಮೂಲಕ ಸಂಪೂರ್ಣ ಗುಣಮುಖರಾಗಿದ್ದು, ಚಿಕಿತ್ಸೆ ಪಡೆದ ಬಳಿಕ ದೀರ್ಘಕಾಲೀನ ಬದುಕುಳಿದವರಾಗಿದ್ದಾರೆ. ಭಾರತದಲ್ಲಿ ಇದೀಗ 50 ಕ್ಕೂ ಹೆಚ್ಚು ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ವಿವರಿಸಿದರು. ಇನ್ನು, 2047 ರ ವೇಳೆಗೆ ಕ್ಯಾನ್ಸರ್‌ ನಾವೀನ್ಯತೆಯಲ್ಲಿ ಭಾರತ ಮುಂಚೂಣಿಗೆ ಬರಲಿದೆ ಎಂದು ಹೇಳಿದರು.
ಇಮ್ಯುನೀಲ್ ಥೆರಪ್ಯೂಟಿಕ್ಸ್‌ನ ಮಂಡಳಿಯ ನಿರ್ದೇಶಕ ಮತ್ತು ಸಿಇಒ ಅಮಿತ್ ಮೂಕಿಮ್ ಮಾತನಾಡಿ, ಈ ವಿಧಾದಲಿ ರೋಗಿಯ ಬಿಳಿ ರಕ್ತಕಣವನ್ನು ಹೊರತೆಗೆದು ಸಂಸ್ಕರಣೆ ಮಾಡಲಾಗುತ್ತದೆ, ಕ್ಯಾನ್ಸರ್‌ ಕೋಶಗಳನ್ನು ಗುರುತಿಸಿ, ನಾಶಗೊಳಿಸುವಂತೆ ಅದರ ವಂಶವಾಯಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಹೀಗಾಗಿ ಕ್ಯಾನ್ಸರ್‌ ಕೋಶವನ್ನು ಸಂಪೂರ್ಣ ನಾಶ ಮಾಡುವ ಶಕ್ತಿ ಈ ಥೆರಪಿಗಿದ್ದು, ಕ್ಯಾನ್ಸರ್‌ ಮರುಕಳುಹಿಸುವ ಸಾಧ್ಯತೆ ಇರುವುದಿಲ್ಲ. ಕಾರ್‌ ಟಿ-ಸೆಲ್‌ ಥೆರಪಿ ರಕ್ತದ ಕ್ಯಾನ್ಸರ್‌ ರೋಗಿಗಳಿಗೆ ವರವಾಗಿ ಪರಿಗಣಿಸಲಿದೆ, ಈ ಥೆರಪಿಯು ದೇಶಿಯವಾಗಿ ಅಭಿವೃದ್ಧಿಪಡಿಸಿರುವದರಿಂದ ಎಲ್ಲರಿಗೂ ಕೈಗೆಟುವ ಚಿಕಿತ್ಸೆ ಆಗಲಿದೆ. ಜಾಗತಿಕವಾಗಿಯೂ ಕಾರ್‌ ಟಿ-ಸೆಲ್‌ ಹೆಚ್ಚು ಕ್ರಾಂತಿಕಾರಿಯಾಗಿದೆ ಎಂದು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು