ಇತ್ತೀಚಿನ ಸುದ್ದಿ
ಬಂಡೀಪುರ: ವಾಸದ ಜಾಗಕ್ಕಾಗಿ ಎರಡು ವ್ಯಾಘ್ರಗಳ ನಡುವೆ ಭಾರೀ ಕಾದಾಟ: ಒಂದು ಹುಲಿ ಗಂಭೀರ
16/08/2025, 11:41
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಗಡಿ ವಿಚಾರದಲ್ಲಿ ಎರಡು ಹುಲಿಗಳ ನಡುವೆ ಕಾದಾಟ ನಡೆದು ಒಂದು ಹುಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಕುಂದಕೆರೆ ವಲಯ ವ್ಯಾಪ್ತಿಯ ಹೆಗ್ಗವಾಡಿ ರಸ್ತೆಯಲ್ಲಿ ಹಾಡಹಗಲೇ ನಡೆದಿದೆ.


ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಹುಲಿಯನ್ನು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರೆ. ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿಎಫ್ ಸುರೇಶ್ ಹಾಗೂ ಕುಂದಕೆರೆ ಆರ್‌ಎಫ್‌ಒ ನಾಗೇಂದ್ರ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ವೈದ್ಯ ಡಾ.ವಾಸೀಂ ಮಿರ್ಜಾ ಅರಿವಳಿಕೆ ಲಸಿಕೆ ನೀಡಿದ ಬಳಿಕ ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.














