ಇತ್ತೀಚಿನ ಸುದ್ದಿ
ಬಣಕಲ್ : ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ; ರೈತರ ಮನೆ ಬಾಗಿಲಿಗೆ ಕೃಷಿ ಸೌಲಭ್ಯ
31/05/2022, 08:26
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಣಕಲ್ ಹೋಬಳಿಯ ಬಣಕಲ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೃಷಿ ಹಾಗೂ ಸಂಬಂಧಿತ ಇಲಾಖೆಗಳು, ಕೃಷಿಕ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ (ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರು) ಮಾತನಾಡಿ, ಕೃಷಿ ಇಲಾಖೆಯು ರೈತರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದು, ಪ್ರತಿಯೊಬ್ಬ ರೈತರು ಇದರ ಸದುಪಯೋಗ ಪಡಿಸಿಕೊಂಡು ಕೃಷಿಯಲ್ಲಿ ಸ್ವಾವಲಂಬಿಯಾಗಿ ಬದುಕಬೇಕೆಂದು ಹೇಳಿದರು.
ಪಿ.ಕೆ ನಾಗೇಶ್ (ಕಾರ್ಯದರ್ಶಿಗಳು ಕೃಷಿಕ ಸಮಾಜ ಮೂಡಿಗೆರೆ) ಅವರು ಮಾತನಾಡಿ, ರೈತರು ಅತಿ ಕಷ್ಟವನ್ನು ಅನುಭವಿಸುತ್ತಿದ್ದು ಇಂಥ ಒಂದು ಕಷ್ಟವನ್ನು ಸರ್ಕಾರ ಹಾಗೂ ಇಲಾಖೆ ಅತ್ಯುನ್ನತ ಯೋಜನೆಗಳನ್ನು ರೂಪಿಸಿ ಬೆಂಬಲವನ್ನು ನೀಡಿ ರೈತರನ್ನು ಸ್ವಾವಲಂಬಿ ಹಾಗೂ ದೇಶದ ಅತ್ಯುನ್ನತ ಆರ್ಥಿಕತೆಯನ್ನು ಹೊಂದಲು ಸಹಾಯ ಮಾಡಬೇಕೆಂದು ತಿಳಿಸಿದರು.
ವನಶ್ರೀ ಲಕ್ಷ್ಮಣಗೌಡ (ರಾಜ್ಯ ಮಹಿಳಾ ರೈತ ಸಂಘದ ಉಪಾಧ್ಯಕ್ಷರು) ಅವರು ಮಾತನಾಡಿ ದೇಶಕ್ಕೆ ಅನ್ನ ನೀಡುವ ರೈತರು ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ ಆದರೂ ಸಹ ರೈತರು ಕೃಷಿಯನ್ನು ಬಿಡದೆ ಅದರಲ್ಲಿನ ಜೀವನವನ್ನು ಸಾಗಿಸುತ್ತಿದ್ದಾರೆ ಹಾಗೇನೆ ಪ್ರಕೃತಿ ವಿಕೋಪಗಳಿಂದ ರೈತರು ಹಲವಾರು ಪೆಟ್ಟುಗಳನ್ನು ತಿಂದಿದ್ದಾನೆ ಆದರೂ ಸಹ ರೈತನು ಕೃಷಿಯನ್ನು ಮುಂದುವರಿಸಿ ಇಡೀ ಜಗತ್ತಿಗೆ ಅನ್ನವನ್ನು ನೀಡುತ್ತಿದ್ದಾನೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿನಯ್ ಕುಮಾರ್ ಕುಮಾರ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ವೆಂಕಟೇಶ್ ಹಾಗೂ ಸಿಬ್ಬಂದಿಗಳಾದ ಶ್ವೇತ,ಪ್ರದೀಪ್, ಗೋಪಾಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಸಿಬ್ಬಂದಿಗಳು ಹಾಗೂ ರೈತರು ಹಾಜರಿದ್ದರು