12:11 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಬಳ್ಳಾರಿ: ಶೃಂಗೇರಿ ಜಗದ್ಗುರುಗಳ ಆಗಮನ; ವಿವಿಧ ಸಮಿತಿಗಳ ಸಿದ್ಧತೆ

16/01/2025, 00:11

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಇದೇ ಜ.19, 20 ಮತ್ತು 21 ರಂದು ಸಂಗನಕಲ್ಲು ರಸ್ತೆಯ ಶ್ರೀ ಶೃಂಗೇರಿ ಶಾರದಾ ಶಂಕರ ಮಠದಲ್ಲಿ ಭಾರತೀತೀರ್ಥ ಸಭಾ ಭವನ ಉದ್ಘಾಟನೆ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಶೃಂಗೇರಿ ಜಗದ್ಗುರುಗಳು ಬಳ್ಳಾರಿಗೆ ಆಗಮಿಸಲಿದ್ದು ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಸಂಗನಕಲ್ಲು ರಸ್ತೆಯ ಶೃಂಗೇರಿ ಶಾರದಾ ಶಂಕರ ಮಠದ ಸಂಚಾಲಕರಾದ ಬಿ.ಕೆ.ಬಿ.ಎನ್.ಮೂರ್ತಿ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ವಿವಿಧ ಸಮಿತಿಗಳ ರೂವಾರಿಗಳು ತಾವು ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಾಧಕ, ಬಾಧಕಗಳನ್ನು ಸಭೆಯ ಗಮನಕ್ಕೆ ತಂದರು.
ಹಿರಿಯ ವಕೀಲರಾದ ವೈ.ರಂಗನಾಥ ರಾವ್ ಅವರು ಮಾತನಾಡಿ ಕಿರ್ಲೋಸ್ಕರ್, ಜಿಂದಾಲ್ ಸೇರಿದಂತೆ ಹಲವು ಉದ್ಯಮಗಳು ಮತ್ತು ಕೈಗಾರಿಕೆಗಳ ವ್ಯವಸ್ಥಾಪಕ ನಿರ್ದೇಶಕರುಗಳು ಮತ್ತು ಗಣ್ಯಮಾನ್ಯರು ಶೃಂಗೇರಿ ಜಗದ್ಗುರುಗಳ ದರ್ಶನಕ್ಕೆ ಬರಲಿದ್ದು ಸಮಿತಿಯು ಸಮಯ ಪಾಲನೆಯ ಜೊತೆಗೆ ಶ್ರೀಗಳ ಭೇಟಿಗೆ ಅನುವು ಮಾಡಿಕೊಡಬೇಕು ಎಂದರು.
ವಕೀಲರಾದ ಮೃತ್ಯುಂಜಯ ಬಂಡ್ರಾಳ್ ಅವರು ಮಾತನಾಡಿ, ಮಠಕ್ಕೆ ಬರುವ ಭಕ್ತರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರುಗಳ ಪಾರ್ಕಿಂಗ್ ಮತ್ತು ಮೋಟಾರ್ ಬೈಕ್ ಗಳ ಪಾರ್ಕಿಂಗ್ ಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಕಾಶ್ ರಾವ್ ಗಡೇಕಲ್ ಅವರು ಭೋಜನ ಸಮಿತಿಯ ನಿರ್ವಹಣೆ ಮಾಡುತ್ತಿದ್ದು 3 ದಿನ ನಡೆಯುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸುಮಾರು 20 ಸಾವಿರಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ. ಭೋಜನಾಲಯದಲ್ಲಿ ಅಗತ್ಯ ಸಿದ್ಧತೆ ಕೈಗೊಂಡಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ಅರುಣಾ ಮಂಜು, ಮಠದ ಆವರಣವೆಲ್ಲ ವಿದ್ಯುತ್ ಅಲಂಕಾರ, ನಾಲ್ಕು ಬೃಹತ್ ಎಲ್.ಇ.ಡಿ.ಗಳ ಅಳವಡಿಕೆ ಜೊತೆಗೆ ಸಮಾರಂಭದ ವೇದಿಕೆಯ ಸೌಂಡ್ ಸಿಸ್ಟಮ್ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್ ಅವರು ಮಾತನಾಡಿ, ಗುರುಗಳ ಶೋಭಾ ಯಾತ್ರೆಯ ವೇಳೆ ಪಾಲ್ಗೊಳ್ಳುವ ಎಲ್ಲ ಭಕ್ತರಿಗೆ ಕೆಆರ್‌ಎಸ್ ಫಂಕ್ಷನ್ ಹಾಲ್ ನಿಂದ ಮಠದವರೆಗೆ ನಿರ್ವಹಣೆ, ಮಠದ ಆವರಣದಲ್ಲಿ ಸ್ವಚ್ಛತೆ ಇತ್ಯಾದಿ ಸೇವೆ ಸಲ್ಲಿಸುವ ಕುರಿತು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಶ್ರೀಮಠದ ಪದಾಧಿಕಾರಿಗಳಾದ ಜೆ.ಮೋಹನ್ ಶಾಸ್ತ್ರಿ,
ಕೆ.ರವಿ ಶಾಸ್ತ್ರಿ, ವಿ.ಮುರಳಿ, ರಘುನಂದನ್, ಶ್ರೀಧರ್, ರಘುನಾಥರಾವ್, ನಾಗರಾಜ್, ಹರಿಪ್ರಸಾದ್, ನಟರಾಜ್, ವಿಜಯಲಕ್ಷ್ಮಿ ಕರೂರು ಸೇರಿದಂತೆ ಹಲವು ಭಕ್ತಾದಿಗಳು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು