ಇತ್ತೀಚಿನ ಸುದ್ದಿ
ಬಲಿಗಾಗಿ ಕಾಯುತ್ತಿವೆ ಮೃತ್ಯುಕೂಪಗಳು!: ಕೊಟ್ಟಾರ ಚೌಕಿಯಿಂದ ಸುರತ್ಕಲ್ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಹೊಂಡಗಳು!
28/06/2024, 20:30
ಮಂಗಳೂರು(reporterkarnataka.com): ಸುರತ್ಕಲ್ ನಿಂದ ಕೊಟ್ಟಾರ ಚೌಕಿ ವರಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತ್ಯು ಕೂಪಗಳು ಬಾಯಿಬಿಟ್ಟು ಕಾಯುತ್ತಿವೆ. ದ್ವಿಚಕ್ರ ವಾಹನ ಸವಾರರಿಗೆ ಇದನ್ನು ತಪ್ಪಿಸಿಕೊಂಡು ಹೋಗುವುದೇ ಸವಾಲಾಗಿ ಪರಿಣಮಿಸಿದೆ.
ಕೇವಲ ಕೊಟ್ಟಾರಚೌಕಿಯಿಂದ ಸುರತ್ಕಲ್ ವರೆಗೆ ಇಂತಹ 100ಕ್ಕೂ ಅಧಿಕ ಮರಣ ಗುಂಡಿಗಳು ಬಾಯಿತೆರೆದು ಆಹುತಿಗಾಗಿ ಕಾಯುತ್ತಿವೆ.
ಸಾವಿರಾರು ದ್ವಿಚಕ್ರ ಸವಾರರು ಪ್ರತಿದಿನ ಈ ಗುಂಡಿ ತಪ್ಪಿಸಿಕೊಂಡು, ಬಿದ್ದುಕೊಂಡು ಪಯಣಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಇನ್ನಾದರೂ ಎಚ್ಚೆತ್ರುಕೊಳ್ಳಬಹುದೇ?