ಇತ್ತೀಚಿನ ಸುದ್ದಿ
ಬೈಲಹೊಂಗಲ: ಕಳ್ಳಭಟ್ಟಿ ಸಾರಾಯಿ ವಿರುದ್ಧ ಅಬಕಾರಿ ಇಲಾಖೆಯಿಂದ ಸರ್ಜಿಕಲ್ ಸ್ಟ್ರೈಕ್
26/03/2022, 10:09
ಬೈಲಹೊಂಗಲ(reporterkarnataka.com):
ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟದ ಕಡಿವಾಣಕ್ಕೆ ಬೈಲಹೊಂಗಲ ಅಬಕಾರಿ ಇಲಾಖೆಯ ಕಾರ್ಯಾಚರಣೆ ಮುಂದುವರಿಸಿದ್ದು, ಮಲ್ಲಾಪುರ್ ಕೆ.ಎನ್. ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಅಬಕಾರಿ ಇಲಾಖೆಯ ಅಧೀಕ್ಷಕ ಬಸವರಾಜು ಮೂಡಸಿ ಮತ್ತು ತಂಡ ಖಚಿತ ಮಾಹಿತಿ ಮೇರೆಗೆ ಬೈಲಹೊಂಗಲ ತಾಲ್ಲೂಕಿನ ನೇಸರ್ಗಿ ಹೋಬಳಿ ವ್ಯಾಪ್ತಿಗೆ ಬರುವ ಮಲ್ಲಾಪುರ್ ಕೆ.ಎನ್. ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಹನುಮಂತ ಬಸವಣೆಪ್ಪ ಆಲಿಯಾಸ್ ಲಕ್ಕಣ್ಣನವರ್ ಎಂಬಾತನ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ, ದಾಳಿ ಸಮಯದಲ್ಲಿ 2 ಲೀಟರ್ 24 ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕಳ್ಳ ಭಟ್ಟಿ ಸಾರಾಯಿ ಸಿಕ್ಕಿದ್ದು, ಒಟ್ಟು 24 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬೈಲಹೊಂಗಲ ಅಧೀಕ್ಷಕ ಬಸವರಾಜು ಮೂಡಸಿ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಉಪ ನಿರೀಕ್ಷಕ ಡಿ.ಎಸ್. ತಲ್ಲೂರ, ವೀರೇಶ್ ಯರಗೋಪ್ಪ, ಸಿಬ್ಬಂದಿಗಳಾದ ವಿ.ಎಂ. ಕೇರಾಳಿ, ಎನ್.ವೈ. ತಗರಿ
ಭಾಗವಹಿಸಿದ್ದರು. ಒಟ್ಟಾರೆ ಅಕ್ರಮ ಕಳ್ಳಭಟ್ಟಿ ಮಾರಾಟಕ್ಕೆ ಕಡಿವಾಣಕ್ಕೆ ಬ್ರೇಕ್ ಹಾಕಲು ಮುಂದಾಗಿ ದಿನ ನಿತ್ಯ ಕಾರ್ಯಾಚರಣೆ ಮಾಡುತ್ತಿರುವ ಬೈಲಹೊಂಗಲ ಅಧೀಕ್ಷಕ ಬಸವರಾಜು ಮೂಡಸಿ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಅಬಕಾರಿ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.