ಇತ್ತೀಚಿನ ಸುದ್ದಿ
ಭದ್ರಾ ರಿಸರ್ವ್ ಫಾರೆಸ್ಟ್ ನಲ್ಲಿ ಆನೆ ಹಂತಕರ ತಂಡ ಕಾರ್ಯಾಚರಣೆ?: ದಂತಕ್ಕಾಗಿ ಆನೆಗೆ ಗುಂಡಿಟ್ರಾ ಕಾಡುಗಳ್ಳರು?
26/09/2024, 20:01

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತರೀಕೆರೆ ತಾಲೂಕಿನ ಭದ್ರಾ ಮೀಸಲು ಅರಣ್ಯದ ಅಲ್ದಾರ ಬಳಿ ಆನೆ ಕಳೆಬರಹ ಪತ್ತೆಯಾಗಿದ್ದು,ಆನೆಯ ದಂತಕ್ಕಾಗಿ ಕಾಡುಗಳ್ಳರು ಆನೆಯನ್ನು ಗುಂಡಿಟ್ಟು ಕೊಂದಿರಬೇಕೆಂಬ ಶಂಕೆ ವ್ಯಕ್ತವಾಗಿದೆ.
ಆನೆಯ ಹಣೆ ಮೇಲೆ 2 ಇಂಚಿನಷ್ಟು ಅಗಲದ ಗುಂಡಿನ ಗುರುತು ಪತ್ತೆಯಾಗಿದೆ. ಆನೆ ತಿಂಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಅಲ್ದಾರ ವಿಭಾಗದ ಭೈರಾಪುರ ವ್ಯಾಪ್ತಿಯಲ್ಲಿ ಯಥೇಚ್ಛವಾಗಿ ಕಾಡಾನೆಗಳು ಇವೆ. ಸ್ಥಳೀಯ ಮೀನುಗಾರರಿಂದ ಆನೆ ಕಳೆಬರಹದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಲಾಯಿತು. ಆನೆ ಸತ್ತ ಜಾಗದಲ್ಲಿ ಆನೆ ದಂತಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ದಂತಚೋರರು ದಂತಕ್ಕಾಗಿ ಆನೆಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ವಿಶೇಷವೆಂದರೆ,
ಆನೆ ಸತ್ತು ತಿಂಗಳಾದರೂ ವಿಷಯ ಅರಣ್ಯ ಇಲಾಖೆ ಗಮನಕ್ಕೆ ಬಂದಿಲ್ವಾ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ.
ಆನೆ ಕಳೆಬರಹವನ್ನ ಅಧಿಕಾರಿಗಳು ಸರಿಯಾಗಿ ತಪಾಸಣೆ ಮಾಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಪರಿಸರವಾದಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆಯೇ ಅನುಮಾನ ಉಂಟಾಗಿದೆ.