3:47 AM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಬಬ್ಲುಗೌಡ ಅವರ ಜನ್ಮದಿನ ನಿಮಿತ್ತ ನಡೆದ ಟೂರ್ನಿ: ಸಿಂಧನೂರು ತಂಡಕ್ಕೆ ಭರ್ಜರಿ ಜಯ

28/12/2024, 14:19

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ನಾರಾಯಣಪುರಿ ಎ.ಎನ್. ಸಿ.ಸಿ ಮೈದಾನದಲ್ಲಿ ಶುಕ್ರವಾರ ಸ್ಥಳೀಯ ರಾಜುಗೌಡ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಚಿವ ರಾಜುಗೌಡ ಹಾಗೂ ಅವರ ಸಹೋದರ ಬಬ್ಲುಗೌಡ ಅವರ ಜನ್ಮದಿನ ನಿಮಿತ್ತ ನಡೆದ ಟೂರ್ನಿಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜುಗೌಡ ಹಾಗೂ ಆಯೋಜಕರು ಆರ್‌ಟಿಜೆ ಚಾಲೆಂಜರ್ಸ್ ವಿನ್ನರ್ಸ್ ಟ್ರೋಫಿ ಹಾಗೆ 2.80.000 ನಗದನ್ನು ಹಣ ಪ್ರತೀಕ್ ಲೆವನ್ ಸಿಂಧನೂರ ತಂಡದ ಪ್ರಾಂಚೈಸಿ ರಾಮನಗೌಡ ಪ್ರಥಮ ಬಹುಮಾನ ಕೊಡಿಗೆ ಎಸ್.ಪಿ. ದಯಾನಂದ ಮಾಲೀಕರು ಡಿ.ಎಸ್. ಮ್ಯಾಕ್ಸ್ ಬೆಂಗಳೂರು ನೀಡಿದರು. ಹಾಗೂ ದ್ವಿತೀಯ ಬಹುಮಾನವನ್ನು ಬಿ.ಎಸ್ ಹಳ್ಳಿಕೋಟಿ, 1.40.000 ನೀಡಿದ್ದರು.


ಅದನ್ನು ಎಫ್.ಎಂ 11 ಹೊಸಪೇಟೆ ತಂಡದ ಪ್ರಾಂಚೈಸಿ ಕ್ಯಾಪ್ಟನ್‌ ಗೆ ರನ್ನರ್ ಟ್ರೋಫಿ, ಹಾಗೂ ನಗದನ್ನು ಹಣ ವಿತರಿಸುವ ಮೂಲಕ ಉಭಯ ತಂಡಗಳಿಗೆ ಹಾರೈಸಿದರು.
ಇದೇ ವೇಳೆ ಟೂರ್ನಿಯ 3 4ನೇ ಸ್ಥಾನ ಗಳಿಸಿದ ತಂಡಗಳ ಪ್ರಾಂಚೈಸಿ ಗಳಿಗೆ ಟ್ರೋಫಿ ಹಾಗುವ ನಗದು ಹಣ ನೀಡಲಾಯಿತು. ಪಂದ್ಯ ಶೇಷ್ಠ ಸರಣಿ ಶೇಷ್ಯ, ಉತ್ತಮ ಬೌಲರ್, ಬ್ಯಾಟ್ಸ್‌ಮನ್, ಬೆಸ್ಟ್ ಫಿಲ್ಟರ್, ಹ್ಯಾಟ್ರಿಕ್ ವಿಕೆಟ್ ಸೇರಿ ಉತ್ತಮ ತಂಡಕ್ಕೆ ಆಯೋಜಕರು ಪ್ರಶಸ್ತಿ, ನಗದು ಬಹುಮಾನ ವಿತರಿಸಿದರು.
*ಪಂದ್ಯದ ಸಾರಾಂಶ:* ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಸಿಂಧನೂರು ತಂಡ ನಿಗದಿತ 16 ಓವರ್ನ ನಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಪ್ರೇರಿಸಿತು. ನಂತರ ಬ್ಯಾಟಿಂಗ್ ಇಳಿದ ಹೊಸಪೇಟ್ ತಂಡ 16 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 117 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡು ರನ್ನರ್ ಟ್ರೋಫಿಗೆ ತೃಪ್ತಿಪಟ್ಟಿತು. ಈ ಮೂಲಕ ” ಸತತ ಎರಡನೇ ಬಾರಿಯೂ ಸಿಂಧನೂರ ತಂಡ ಆರ್‌ಟಿಜೆ ಚಾಲೆಂ ಜರ್ಸ್ ವಿನ್ನರ್ಸ್ ಟ್ರೋಫಿ ಗೆದ್ದು ಕೊಂಡಂತಾಗಿದೆ.
ಗ್ರಾಮೀಣ ಭಾಗದಲ್ಲಿ ನಾರಾಯಣಪುರದ ಅಭಿಮಾನಿಗಳು ಯಶಸ್ವಿಯಾಗಿ ಆರ್‌ಟಿಜೆ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿರುವುದು ಶ್ಲಾಘನೀಯ. ಈ ಟೂರ್ನಿಯಲ್ಲಿ ದೇಶದ ವಿವಿಧ ರಾಜ್ಯಗಳ ರಾಷ್ಟ್ರಮಟ್ಟದಲ್ಲಿ ಮಿಂಚುವ ಸ್ಟಾರ್ ಕ್ರಿಕೇಟ್ ಆಟಗಾರರು ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ ಎಂದು ಮಾಜಿ ಸಚಿವರು ನರಸಿಂಹನಾಯಕ (ರಾಜುಗೌಡ) ಮಾತನಾದಿದರು ಜೊತ್ತೆಗೆ ಶ್ರೀ ನರಸಿಂಹ ನಾಯಕ ರಾಜುಗೌಡ ಅಭಿಮಾನಿಗಳ ಸಂಘದಿಂದ 2025ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮುಂಖಂಡರಾದ ರಾಜಾ ಹನುಮಂತನಾಯಕ, ಬಬ್ಲು ಗೌಡ, ರಾಜಾ ಕುಶಾಲನಾಯಕ ಜಹಾಗೀರದಾರ, ಸಿದ್ದನಗೌಡ ಕರಿಭಾವಿ, ಡಾ.ಬಿ.ಎಂ. ಅಳ್ಳಿಕೋಟಿ, ಬಿ. ಎನ್.ಪೊಲೀಸ್ ಪಾಟೀಲ್, ಮಲ್ಲು ನವಲಗುಡ್ಡ, ಸಂಗನಬಸ್ಸು ಚಟ್ಟೇರ್, ಆಂಜನೇಯ ದೊರೆ, ಸಂಗಮೇಶ ಕೊಳುರ್, ಶಿವು ಬಿರಾದಾರ, ರಮೇಶ ಗೌಡರ, ಯಂಕಪ್ಪ ರೋಡಲಬಂಡಾ, ಮುತ್ತು ಕಬಡರ, ಗೌಡಪ್ಪ, ಮಂಜು ಹಾದಿಮನಿ, ನರಸಪ್ಪ, ಲಕ್ಷ್ಮಣ ನಾಯಕ, ಗೌಡಪ್ಪ ಗೌಡ, , ದೇಗಲಮಡ್ಡಿ, ಜಟ್ಟಿಪ್ಪ ಗೊಳಸಂಗಿ ಸೇರಿ ವಿವಿಧ ತಂಡಗಳ ಕ್ರಿಕೆಟ್ ಆಟಗಾರರು, ಕ್ರೀಡಾಭಿಮಾನಿಗಳು, ರಾಜುಗೌಡ ಅಭಿಮಾನಿಗಳು ಇದ್ದರು.
ಇದೇ ಸಂದರ್ಭದಲ್ಲಿ ಕಲಾವಿದ ಕರಿಬಸವ ಕನ್ನಡದ ಹಿಟ್ ಚಲನಚಿತ್ರ ಗೀತೆಗಳನ್ನು ಹಾಡಿ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು