ಇತ್ತೀಚಿನ ಸುದ್ದಿ
ಬಾವಿಯಲ್ಲಿ ರುಂಡವಿರದ ದೇಹ ಪತ್ತೆ ! ; ಬೆಳಗಾವಿಯಲ್ಲೊಂದು ಭೀಕರ ಘಟನೆ
05/07/2022, 15:31
ಬೆಳಗಾವಿ(Reporterkarnataka.com)
ರುಂಡ ಕತ್ತರಿಸಿದ ಅಪರಿಚಿತ ವ್ಯಕ್ತಿಯೊಬ್ಬರ ದೇಹ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಮುತಗಾ ಗ್ರಾಮದಲ್ಲಿ ನಡೆದಿದ್ದು, ಈ ಮೃತದೇಹ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬೆಳಗಾವಿಯ ಮುತಗಾ-ಮುಚ್ಛಂಡಿ ರಸ್ತೆ ಮಧ್ಯದಲ್ಲಿರುವ ಸುನೀಲ್ ಅಷ್ಟಗೇಕರ್ ಎಂಬುವವರಿಗೆ ಸೇರಿದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರುಂಡ ಇಲ್ಲದ ದೇಹ 35 ವರ್ಷದ ಅಪರಿಚಿತ ವ್ಯಕ್ತಿಯದ್ದು ಎಂದು ಅಂದಾಜಿಸಲಾಗಿದೆ. ಯಾರೋ ಕೊಲೆಗೈದು ಬಾವಿಯಲ್ಲಿ ಬೀಸಾಕಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.