ಇತ್ತೀಚಿನ ಸುದ್ದಿ
ಭಾರೀ ಮಳೆ: ಮೂಡಿಗೆರೆ ಬಾಳೂರಿನಲ್ಲಿ ಮನೆ ಕುಸಿತ; ಅದೃಷ್ಟವಶಾತ್ ಮನೆ ಮಂದಿ ಪಾರು
09/07/2022, 12:40
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದರ್ಬಾರ್ ಪೇಟೆ ಗಣೇಶ್ ಅವರ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಕೊಟ್ಟಿಗೆಹಾರದಿಂದ ಹೊರನಾಡು ಸಂಪರ್ಕಿಸುವ ಹೆದ್ದಾರಿಗೆ ಕೆಳಗೂರು ಸಮೀಪ ಮರ ಬಿದ್ದಿದ್ದು ಅರ್ಧ ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿದ ಬಳಿಕ ಸಂಚಾರ ಸುಗಮವಾಗಿದೆ.