ಇತ್ತೀಚಿನ ಸುದ್ದಿ
ಬಾಳೆಹೊನ್ನೂರು: ಅನೈತಿಕ ಸಂಬಂಧ; ವಾಟ್ಸಾಪ್ ಗೆಳೆಯನಿಂದ 25ರ ಹರೆಯದ ಗೃಹಿಣಿಯ ಭೀಕರ ಹತ್ಯೆ
07/12/2024, 19:48
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ 25ರ ಹರೆಯದ ಗೃಹಿಣಿಯನ್ನು ವಾಟ್ಸಾಪ್ ಸ್ನೇಹಿತ ಬರ್ಬರವಾಗಿ ಹತ್ಯೆಗೈದ ಘಟನೆ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ.
ಕಿಚ್ಚಬ್ಬಿ ಗ್ರಾಮದ ತೃಪ್ತಿ (25) ಎಂಬಾಕೆ ಮೃತ ದುರ್ದೈವಿ.
ವಾಟ್ಸಾಪ್ ಸ್ನೇಹಿತ ಚಿರಂಜೀವಿ ಚಾಕುವಿನಲ್ಲಿ ಚುಚ್ಚಿ ಸಾಯಲಿಲ್ಲ ಎಂದು ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ.
ವಾಟ್ಸಾಪ್ ನಲ್ಲಿ ತೃಪ್ತಿಗೆ ಸ್ನೇಹಿತನಾಗಿದ್ದ ಆರೋಪಿ ಚಿರಂಜೀವಿ ಜೊತೆ ಮೃತ ತೃಪ್ತಿ ಹೋಗಿದ್ದಳು.
ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದಾಖಲಾಗಿತ್ತು.
ವಾಪಸ್ ಬಂದ ಬಳಿಕ ಮನೆಯವರ ರಾಜಿ ಬಳಿಕ ಆತನ ಜೊತೆ ಮಾತು-ಸ್ನೇಹವನ್ನು ತೃಪ್ತಿ ಬಿಟ್ಟಿದ್ದಳು. ಇಂದು ಏಕಾಏಕಿ ಮನೆಗೆ ಬಂದು ಆತ ಮಕ್ಕಳ ಎದುರೇ ಚುಚ್ಚಿ ಕೊಲೆಗೆ ಯತ್ನಿಸಿದ್ದ. ಚಾಕುವಿನಿಂದ ಚುಚ್ಚಿ ಸಾಯಲಿಲ್ಲ ಎಂದು ಮನೆ ಹಿಂದಿನ ಕೆರೆಗೆ ಎಸೆದಿದ್ದಾನೆ. ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ನಡೆದಿರುವಾಗ ಈ ದುಷ್ಕೃತ್ಯ ನಡೆದಿದೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.