4:16 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ಅಯನಾ ವಿ. ರಮಣ್ ಗೆ ಅವಳಿ ಡಿಸ್ಟಿಂಕ್ಷನ್ : ಕಲಿಕೆಗೂ ಜೈ, ಭರತನಾಟ್ಯಕ್ಕೂ ಸೈ!

29/03/2022, 22:33

ಮೂಡುಬಿದಿರೆ(reporterkarnataka.com) : ಇಲ್ಲಿನ ಬಹುಮುಖ ಪ್ರತಿಭೆಯ ಅಯನಾ ವಿ. ರಮಣ್ 2022 – 23ರ ಶೈಕ್ಷಣಿಕ ವರ್ಷದಲ್ಲಿ ಎರಡು ವಿಚಾರಗಳಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅವಳಿ ಡಿಸ್ಟಿಂಕ್ಷನ್ ನ ಅಪರೂಪದ ಸಾಧನೆ ದಾಖಲಿಸಿದ್ದಾರೆ.

ವಿದುಷಿ ಶಾರದಾ ಮಣಿ ಶೇಖರ್ ಶಿಷ್ಯೆಯಾಗಿ , ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಡಳಿ ನಡೆಸುವ ಭರತ ನಾಟ್ಯದ ಅಂತಿಮ ವಿದ್ವತ್ ಪರೀಕ್ಷೆ ಯಲ್ಲಿ ಅತ್ಯುತ್ತಮವಾದ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಕೋವಿಡ್ ಕಾರಣದಿಂದಾಗಿ ತಡವಾಗಿ ಘೋಷಣೆಯಾದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಎರಡನೆ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಇದೀಗ ಪ್ರಕಟವಾಗಿದ್ದು ಅಯನಾ ಅದರಲ್ಲೂ ಡಿಸ್ಟಿಂಕ್ಷನ್ ಸಾಧಿಸಿದ್ದಾರೆ.

ಭರತ ನಾಟ್ಯದ ಸಾಧನೆಗಾಗಿ ಕೇಂದ್ರ ಸರಕಾರದ ಸಿ ಸಿ ಆರ್ ಟಿ ಸ್ಕಾಲರ್ಶಿಪ್ ಪಡೆಯುತ್ತಿರುವ ಅಯನಾ , ಪದವಿ ಕಲಿಕೆಗಾಗಿಯೂ ಶೈಕ್ಷಣಕ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಕಲಾ ಪದವಿ ವಿದ್ಯಾರ್ಥಿಯಾಗಿರುವ ಅಯನಾ. ವಿ.ರಮಣ್ ಅವರು, ಕಲಾವಿದ ಕೆ. ವಿ. ರಮಣ್ – ಆಳ್ವಾಸ್ ಉಪನ್ಯಾಸಕಿ ಡಾ. ಮುಕಾಂಬಿಕಾ ಜಿ. ಎಸ್.ದಂಪತಿಯ ಪುತ್ರಿ.

ಬೆಂಗಳೂರಿನ ವಿದ್ವಾನ್ ಸತ್ಯನಾರಾಯಣರಾಜು ಅವರಲ್ಲಿ ಭರತನಾಟ್ಯದ ವಿಶೇಷ ತರಬೇತಿ ಪಡೆಯುತ್ತಿರುವ ಅಯನಾ , ತನ್ನ ಎಂಟನೇ ತರಗತಿಯಿಂದಲೇ ಆಳ್ವಾಸ್ ದತ್ತು ಸ್ವೀಕಾರದ ವಿದ್ಯಾರ್ಥಿಯಾಗಿರುವುದನ್ನು ಇಲ್ಲಿ ನೆನಪಿಸಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು